Job Description: * ಬ್ರಿಟನ್ ರಾಣಿ 2 ನೇ ಎಲಿಜಬೆತ್ ಅಂತ್ಯಕ್ರಿಯೆ ಅವರ ಅಂತ್ಯಕ್ರಿಯೆ ಸೆಪ್ಟೆಂಬರ್ 19 ರಂದು ವಿಂಡ್ಸರ್ ಕ್ಯಾಸಲ್ ನಲ್ಲಿ ನಡೆಯಿತು. ರಾಣಿಯ ಪತಿ ರಾಜ ಫಿಲಿಪ್ ಅವರ ಅಂತ್ಯಕ್ರಿಯೆ ಎನ್ನು ಸೇಂಟ್ ಜಾರ್ಜ್ ಚಪಲ್ ನಲ್ಲಿ ನಡೆಸಲಾಗಿತ್ತು.ರಾಜನ ಅಂತ್ಯಕ್ರಿಯೆ ನಡೆಸಿದ ಸ್ಥಳದ ಪಕ್ಕದಲ್ಲೇ ರಾಣಿಯನ್ನು ಸಮಾಧಿ ಮಾಡಲಾಗಿದೆ.* ಭಾರತದ ದ್ರೌಪದಿ ಮುರ್ಮು, ಅಮೇರಿಕ ಅಧ್ಯಕ್ಷ ಜೋ ಬೈಡನ್ ಸೇರಿ 500 ಕ್ಕೂ ಹೆಚ್ಚು ನಾಯಕರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.* 70 ವರ್ಷ ಬ್ರಿಟನಿನ ರಾಣಿಯಾಗಿ ಆಳ್ವಿಕೆ ಮಾಡಿ ಇತಿಹಾಸವನ್ನು ಬರೆದಿದ್ದರೆ.* ರಾಣಿ 2 ನೇ ಎಲಿಜಬೆತ್ ಅವರ ಪಾರ್ಥವ ಶರೀರ ಇಡಲಾಗಿದ್ದ ಶವಪೆಟ್ಟಿಗೆಯನ್ನು ರಾಜಮನೆತನದ ಸ್ಯಾಂಡ್ರಿಂಗ್ ಹ್ಯಾಮ್ ಎಸ್ಟೇಟ್ ನಲ್ಲಿ ಬೆಳೆದಿದ್ದ ಓಕ್ ಮರ ಬಳಸಿ ನಿರ್ಮಿಸಿದ್ದು, ಅಂಚುಗಳಲ್ಲಿ ಲೆಡ್ ನ ಹಾಳೆ ಅಳವಡಿಸಲಾಗಿತ್ತು. * ಶವಪೆಟ್ಟಿಗೆಯನ್ನು ಹೆನ್ರಿ ಸ್ಮಿತ್ ಅವರು ನಿರ್ಮಿಸಿದ್ದರು. * ಯುನೈಟೆಡ್ ಕಿಂಗ್‌ಡಂನ ರಾಣಿ ಎಲಿಜಬೆತ್ ರಾಣಿಯಾಗಿ ಅಧಿಕಾರ ಜೂನ್ 2, 1953 ರಲ್ಲಿ ಸ್ವೀಕರಿಸಿದರು. ಬ್ರಿಟನ್‌ಅನ್ನು ದೀರ್ಘಾವಧಿ ಕಾಲದವರೆಗೆ ಆಳಿದ ದೊರೆ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.* ರಾಣಿಯ ಪಟ್ಟಾಭಿಷೇಕದ ಸಮಯದಲ್ಲಿ ಅವರ 27 ವಯಸ್ಸಿನವರಾಗಿದ್ದರು. ರಾಜಮನೆತನವು ಸಾಂಪ್ರದಾಯಿಕವಾಗಿ ಕ್ರಿಸ್ಮಸ್ ಹಬ್ಬವನ್ನು ಸ್ಯಾಂಡ್ರಿಗ್ಹ್ಯಾಮ್ ನಾಪೋರ್ಕನಲ್ಲಿ ಆಚರಿಸಲಾಗುತ್ತದೆ. * ರಾಜಮನೆತನದ ನಿಜವಾದ ಹೆಸರು ದಿ ಹೌಸ್ ಆಫ್ ವಿಂಡ್ಸರ್. ರಾಣಿ ಎಲಿಜಬೆತ್‌ನ ಬಾಲ್ಯದ ಹೆಸರು ಲಿಲಿಬಿಟ್.