Job Description: * ಭಾರತದ ಟೇನಿಸ್ ಆಟಗಾರ ಡೇವಿಸ್ ಕಪ್ ತಂಡದ ನಾಯಕ ನರೇಶ ಕುಮಾರ ಇದೆ ಸೆಪ್ಟೆಂಬರ್ 14 ರಂದು ನಿಧನರಾದರು. * ನರೇಶ ಕುಮಾರ ಅವರಿಗೆ 93 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಸುನೀತಾ, ಪುತ್ರ ಅರ್ಜುನ್ ಮತ್ತು ಇಬ್ಬರು ಪುತ್ರಿಯರಾದ ಗೀತಾ ಮತ್ತು ಪ್ರಿಯಾ ಇದ್ದಾರೆ.* ನರೇಶ ಅವರು 1949 ರಲ್ಲಿ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಟೆನಿಸ್‌ ಪ್ರಾರಂಭಿಸಿದರು, 1950 ರ ದಶಕದಲ್ಲಿ ರಾಮನಾಥನ್ ಕೃಷ್ಣನ್ ಅವರೊಂದಿಗೆ ಸುಮಾರು ಒಂದು ದಶಕದ ಕಾಲ ಭಾರತೀಯ ಟೆನಿಸ್ ಅನ್ನು ಆಳಿದರು.* ನರೇಶ್ ಕುಮಾರ್ ಹವ್ಯಾಸಿಯಾಗಿ 101 ವಿಂಬಲ್ಡನ್ ಪಂದ್ಯಗಳನ್ನು ಆಡಿದ್ದಾರೆ. * ಐರಿಶ ಚಾಂಪಿಯನ್ ಷಿಪ್, ವೆಲ್ಯ ಚಾಂಪಿಯನ್ ಷಿಪ್, ಎಸೆಕ್ಸ್ ಚಾಂಪಿಯನ್ ಷಿಪ್ ಮತ್ತು ಸ್ವಿಟ್ಜರ್ಲೆಂಡ್ ನಲ್ಲಿ ನಡೆದ ವೆನ್ ಜಾನ್ ಟೋರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿಯನ್ನು ಗಳಿಸಿದ್ದಾರೆ * ನರೇಶ್ ಅವರಿಗೆ ಅರ್ಜುನ ಪ್ರಶಸ್ತಿ ಮತ್ತು ದ್ರೋಣಾಚಾರ್ಯ ಪ್ರಶಸ್ತಿಗಳು ಲಭಿಸಿವೆ, ಇವರು ಟೆನಿಸ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.