Job Description: * ಭಾರತೀಯ ಅಂಚೆ ಇಲಾಖೆಯು ಹಾಕಿ ಚಾಂಪಿಯನ್ ಆಟಗಾರ್ತಿ ಮತ್ತು ಆಡಳಿತಗಾರ್ತಿ ಎಲ್ವಿರಾ ಬ್ರಿಟ್ಟೊ ಅವರ ಹೆಸರಿನಲ್ಲಿ ವಿಶೇಷ ಪೋಸ್ಟಲ್ ಕವರ್ ನೀಡಿ ಗೌರವಿಸಿತು.* ಮತ್ತು 1960 ರಿಂದ 67 ರ ಅವಧಿಯಲ್ಲಿ 8 ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಲು ಎಲ್ವಿರಾ ಅವರ ಆಟ ಪ್ರಮುಖ ಕಾರಣವಾಗಿತ್ತು.* ಇದೇ 29 ರಂದು ರಾಷ್ಟ್ರೀಯ ಕ್ರೀಡಾದಿನಾಚರಣೆಯಲ್ಲಿ ಬಿಡುಗಡೆಯಾಗಲಿದೆ.* ಭಾರತದ ಮಾಜಿ ಹಾಕಿ ತಂಡದ ನಾಯಕ ಎಂ.ಪಿ. ಗಣೇಶ ಅವರು ಬೆಂಗಳೂರು ಜಿಪಿಒದ ಮೇಘದೊತಸಭಾಂಗಣದಲ್ಲಿ ಪೋಸ್ಟಲ್ ಕವರ್ ಬಿಡುಗಡೆ ಮಾಡುವರು .* *ಎಲ್ವಿರಾ ಜೀವನ ಚರಿತ್ರೆ : - * ಎಲ್ವಿರಾ ಬ್ರಿಟ್ಟೊ ಅವರು 15 ಜೂನ್ 1940 ರಂದು ಜನಿಸಿದರು. ಇವರು ಮಹಿಳಾ ಹಾಕಿ ಕ್ರೀಡೆಯಲ್ಲಿ ಚಾಂಪಿಯನ್ ಆಟಗಾರ್ತಿ ಮತ್ತು ಹಾಕಿ ಕ್ರೀಡೆಯಲ್ಲಿ, ಅರ್ಜುನ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ .* ಕರ್ನಾಟಕ ರಾಜ್ಯ ಮಹಿಳಾ ಹಾಕಿ ಸಂಸ್ಥೆಗೆ ಎಂಟು ವರ್ಷ ಅಧ್ಯಕ್ಷೆ ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲಿ 12 ವರ್ಷ ಸರ್ಕಾರದ ನಾಮನಿರ್ದೇಶಿತ ಸದಸ್ಯರಾಗಿದ್ದರು.