Job Description: * 75 ನೇ ಸ್ವಾತಂತ್ರೋತ್ಸವದ ದಿನದಂದು ಮೊದಲ ಭಾಷಣ ಮಾಡಿದ ಮುರ್ಮು ಅವರು ಭವ್ಯ ಭಾರತದ ನಿರ್ಮಾಣದಲ್ಲಿ ದೇಶದ ಯುವಜನರು ರಾಷ್ಟ್ರಕವಿ ಕುವೆಂಪು ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೇಳಿದರು.* ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನವ ಭಾರತದ ನಿರ್ಮಾಣದಲ್ಲಿ ಮಾತ್ರ ನಮ್ಮ ಅಸ್ತಿತ್ವವು ಸಾರ್ಥಕ್ಯಗೊಳ್ಳುತ್ತದೆ ಎಂದರು.* ಕನ್ನಡದ ರಾಷ್ಟ್ರಕವಿ ಕುವೆಂಪು ಅವರ ಕನವದ 'ನಾನು ಅಳಿವೆ, ನೀನೂ ಅಳಿವೆ. ನಮ್ಮ ಎಲಬುಗಳ ಮೇಲೆ ಮೂಡುವುದು, ಮೂಡುವುದು ನವ ಭಾರತದ ಲೀಲೆ' ಎಂಬ ಸಾಲನ್ನು ಉಲ್ಲೇಖಿಸಿದರು. ಅದರಲ್ಲಿರುವ ಆದರ್ಶಗಳನ್ನು ಪಾಲಿಸುವಂತೆ ಕರೆ ನೀಡಿದರು. * ತಾಯ್ನಾಡಿಗಾಗಿ ಸಂಪೂರ್ಣ ತ್ಯಾಗಿಗಳಾಗಿ ಎಂಬ ಕವಿವಾಣಿಯಂತೆ ಯುವ ಸಮುದಾಯ 2047 ರ ಭಾರತವನ್ನು ಕಟ್ಟಬೇಕು ಎಂದರು.* 75 ನೇ ಸ್ವತಂತ್ರ ದಿನಾಚರಣೆಯ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಕೆಂಪು ಕೋಟೆಯ ಮೇಲೆ ಸತತ 9 ನೇ ಬಾರಿ ರಾಷ್ಟ್ರ ದ್ವಜಾರೋಹಣ ಮಾಡಲಿದ್ದಾರೆ.