Job Description: * ಭಾರತವು ಸ್ವಾತಂತ್ರ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಶ್ರೀಲಂಕಾ ಹಾಗೂ ಪಾಕಿಸ್ತಾನದ ಯುದ್ಧನೌಕೆಗಳು ಶ್ರೀಲಂಕಾದ ದಕ್ಷಿಣ ಕರಾವಳಿಯಲ್ಲಿ ಜಂಟಿ ಕವಾಯತು ನಡೆಸಲಿವೆ.* ಪಾಕಿಸ್ತಾನದ ನೌಕಾಪಡೆಗೆ ಸೇರಿದ ' ಪಿಎನ್‌ಎಸ್ ತೈಮೂರ್ ' ಹಾಗೂ ಶ್ರೀಲಂಕಾ ನೌಕಾಪಡೆಗೆ ಸೇರಿದ ' ಎಸ್‌ಎಲ್‌ಎನ್‌ಎಸ್ ಸಿಂಧೂರಳಾ ' ಯುದ್ಧನೌಕೆಗಳು ಜಂಟಿಯಾಗಿ ಕವಾಯತು ನಡೆಸಲಿವೆ.* ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವುದು ಹಾಗೂ ಸಹಕಾರವನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ ಎಂದು ಶ್ರೀಲಂಕಾದ ನೌಕಾಪಡೆಯು ಹೇಳಿಕೆ ಕೊಟ್ಟಿದೆ.* ಆದರೆ ಜಂಟಿ ಸಮರಾಭ್ಯಾಸ ನಡೆಸುವ ಸಾಧ್ಯತೆ ಇದೆ ಎಂಬ ಮಾಧ್ಯಮಗಳ ವರದಿಗಳನ್ನು ಶ್ರೀಲಂಕಾ ತಳ್ಳಿಹಾಕಿದೆ.