Job Description: * 'ಹಲೋ ಬೇಡ, ವಂದೇ ಮಾತರಂ ಹೇಳಿ ಎಂದು ಅಧಿಕಾರಿಗಳಿಗೆ ಮಹಾರಾಷ್ಟ್ರ ಸಚಿವ ಮುಂಗಂತಿವಾರ್ ಅವರು August 15 ಅಮೃತ ಮಹೋತ್ಸವವನ್ನು (ಸ್ವಾತಂತ್ರ್ಯದ) ಆಚರಿಸುತ್ತಿರುವ ಸಂದರ್ಭದಲ್ಲಿ ಹೇಳಿದರು.* ಮಹಾರಾಷ್ಟ್ರದ (Maharashtra) ನೂತನವಾಗಿ ನೇಮಕಗೊಂಡಿರುವ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್ ಮುಂಗಂತಿವಾರ್ ಭಾನುವಾರ, ಎಲ್ಲಾ ರಾಜ್ಯ ಸರ್ಕಾರಿ ಅಧಿಕಾರಿಗಳು ಇನ್ನು ಕಚೇರಿ ಅವಧಿಯಲ್ಲಿ ದೂರವಾಣಿ ಕರೆ ಸ್ವೀಕರಿಸುವಾಗ ' ಹಲೋ ' ಬದಲು “ ವಂದೇ ಮಾತರಂ" ಎಂದೇ ಹೇಳಬೇಕು ಎಂದು ಸಚಿವರು ಹೇಳಿದರು.* ಸ್ವಾತಂತ್ರ್ಯದ 76 ನೇ ವರ್ಷಕ್ಕೆ (Azadi Ka Amrit Mahotsav) ನಾವು ಕಾಲಿಡುತ್ತಿದ್ದೇವೆ ಎಂದು ಮುಂಗಂತಿವಾರ್ ಮಾತನಾಡಿದರು. * ನಾವು ಅಮೃತ ಮಹೋತ್ಸವವನ್ನು (ಸ್ವಾತಂತ್ರ್ಯದ) ಆಚರಿಸುತ್ತಿದ್ದೇವೆ. * ಅದಕ್ಕಾಗಿಯೇ ಅಧಿಕಾರಿಗಳು ಫೋನ್ ಎತ್ತಿದಾಗ ‘ಹಲೋ’ ಬದಲು ‘ವಂದೇ ಮಾತರಂ’ ಎಂದು ಹೇಳಬೇಕೆಂದು ನಾನು ಬಯಸುತ್ತೇನೆ ಎಂದರು.* ಈ ಬಗ್ಗೆ ಆಗಸ್ಟ್ 18 ರೊಳಗೆ ಅಧಿಕೃತ ಸರ್ಕಾರಿ ಆದೇಶ ಬರಲಿದೆ ಎಂದು ಹೇಳಿದರು. ಮುಂದಿನ ವರ್ಷದ ಜನವರಿ 26 ರೊಳಗೆ ರಾಜ್ಯದ ಎಲ್ಲಾ ಸರ್ಕಾರಿ ಅಧಿಕಾರಿಗಳು 'ವಂದೇ ಮಾತರಂ' (Vande Mataram) ಎಂದು ಹೇಳಬೇಕೆಂದು ನಾನು ಬಯಸುತ್ತೇನೆ (ಫೋನ್ ಎತ್ತಿದಾಗ)," ಎಂದು ಸಚಿವರು ಹೇಳಿದರು.