Job Description: * ಇತ್ತೀಚಿಗೆ ಎರಡು ಉಪಗ್ರಹ ಗಳನ್ನು ಹೊತ್ತು ಆಕಾಶದತ್ತ ಹಾರಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO)ಯ ನೂತನ ರಾಕೆಟ್ SSLV-D1 ಕೊನೆಯ ಹಂತದಲ್ಲಿ ವಿಫಲವಾಗಿದೆ.* ಭೂಮಿಯ ಮೇಲ್ಮೈ ನಿಂದ 500 ಕಿ.ಮೀ. ಅಂತರದಲ್ಲಿರುವ ಕಕ್ಷೆಗಳಿಗೆ ಉಪಗ್ರಹಗಳನ್ನು ಸೇರಿಸುವ ಉದ್ದೇಶದಿಂದಲೇ ಎಸ್‌ಎಸ್‌ಎಲ್‌ವಿ ಕಿರು ರಾಕೆಟ್ ಅನ್ನು ಅಭಿವೃದ್ಧಿಪಡಿಸಲಾಗಿತ್ತು.* ಈ ರಾಕೆಟ್‌ನ ಮೊದಲ ಕಾರ್ಯಾಚರಣೆಯಲ್ಲಿ (SSLV - D1) ಇಸ್ರೋ ತನ್ನದೇ ಭೂ ಸರ್ವೇಕ್ಷಣಾ ಉಪಗ್ರಹ (ಇಒಎಸ್ 02) ಮತ್ತು ಸ್ಪೇಸ್ ಕಿಡ್ಸ್ ಇಂಡಿಯಾದ ' ಆಜಾದಿಸ್ಯಾಟ್‌ ' ಅನ್ನು ಕಕ್ಷೆಗೆ ಸೇರಿಸಲು ಉದ್ದೇಶಿಸಿತ್ತು.* ಎಸ್‌ಎಸ್‌ಎಲ್‌ವಿ - ಡಿ 1 ಎಲ್ಲಾ ಹಂತಗಳಲ್ಲೂ ನಿರೀಕ್ಷೆ ಯಂತೆಯೇ ಕೆಲಸ ಮಾಡಿತು. ಆದರೆ, ದತ್ತಾಂಶ ರವಾನೆ ಕಡಿತವಾದ ಕಾರಣ ಕಾರ್ಯಾಚರಣೆಯ ಕೊನೆಯ ಹಂತ ಪರಿಪೂರ್ಣವಾಗಿಲ್ಲ. * SSLV - D1 ತನ್ನ ಪಥವನ್ನು ಬದಲಿಸಿ, ಉಪಗ್ರಹಗಳನ್ನು ಬೇರೆ ಕಕ್ಷೆಗೆ ಸೇರಿಸಿದೆ.* ಉಪಗ್ರಹಗಳು 356 KM ದೂರದ ವೃತ್ತಾಕಾರದ ಕಕ್ಷೆ ಸೇರಬೇಕಿತ್ತು. ಆದರೆ ಅವು 356 KM ದೂರದ ಅಂಡಾಕಾರದ ಕಕ್ಷೆ ಸೇರಿವೆ. ಹೀಗಾಗಿ ಅವು ನಿರುಪಯುಕ್ತವಾಗಿವೆ ಎಂದು ಇಸ್ರೋ ವಿವರಣೆ ನೀಡಿದೆ.