Job Description: LAC ಗಡಿಯಲ್ಲಿ ಚೀನಾ ಮೇಲೆ ಕಣ್ಣಿಡಲು HAL ನಿಂದ ಆಧುನಿಕ ಡ್ರೋನ್* ವಾಸ್ತವ ಗಡಿ ನಿಯಂತ್ರಣ ರೇಖೆ ಮೇಲೆ ನಿಗಾ ಇಡುವುದು ಸೇರಿದಂತೆ ವಿವಿಧ ಕಾರ್ಯಗಳಿಗೆ ನೆರವಾಗಬಲ್ಲ ಆಧುನಿಕ ಡ್ರೋನ್ ಅನ್ನು ಅಭಿವೃದ್ಧಿ ಪಡಿಸುತ್ತಿದೆ. * ಕ್ಷಿಪಣಿಗಳು ಹಾಗೂ ಸೆನ್ಸಾರ್ ಸೇರಿದಂತೆ 40 ಕೆ.ಜಿ ಭಾರದ ವಸ್ತುಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನೂ ಇದು ಹೊಂದಿದೆ. ಸೇನೆಯ ಅಗತ್ಯತೆ ಗಮನದಲ್ಲಿಟ್ಟುಕೊಂಡು, ಪರ್ವತ ಶ್ರೇಣಿಗಳು ಹಾಗೂ ಎಲ್‌ಎಸಿ ಮೇಲೆ ನಿಗಾ ಇಡುವುದಕ್ಕೆ ನೆರವಾಗುವ ಉದ್ದೇಶದಿಂದಲೇ ಈ ಡ್ರೋನ್ ಅಭಿವೃದ್ಧಿಪಡಿಸಲಾಗುತ್ತಿದೆ.* ಈ ಡ್ರೋನ್ ನ ಕಾರ್ಯಾಚರಣೆ ವ್ಯವಸ್ಥೆಯು ಕೃತಕ ಬುದ್ಧಿಮತ್ತೆಯ ತಂತ್ರಾಂಶವನ್ನು ಒಳಗೊಂಡಿರಲಿದೆ.* ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರಿಯ ಸಹಭಾಗಿತ್ವದ ಲ್ಲಿ ಹೆರಾನ್ ಟಿಪಿ ಡ್ರೋನ್ ಗಳನ್ನು ಅಭಿವೃದ್ಧಿಪಡಿಸುವ ಯೋಜನೆಯೊಂದನ್ನೂ HAL ಹೊಂದಿದೆ.* ಮಧ್ಯಮ ಎತ್ತರದ ಹೆರಾನ್ ಡ್ರೋನ್ ಗಳು 35 ಸಾವಿರ ಅಡಿಗಳಷ್ಟು ಎತ್ತರಕ್ಕೆ ಹಾರಬಲ್ಲ ಹಾಗೂ ಸುಮಾರು 45 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಬಲ್ಲ ಸಾಮರ್ಥ್ಯ ವನ್ನು ಹೊಂದಿರಲಿವೆ.