Job Description: * ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಪ್ಯಾರಾ ಪವರ್ಲಿಫ್ಟಿಂಗ್ನಲ್ಲಿ ಹರಿಯಾಣದ ಸುಧೀರ್ ಅವರು ಚಿನ್ನ ಗೆದ್ದರು.* 27 ವರ್ಷದ ಸುಧೀರ್ ಹೆವಿವೇಟ್ ಪ್ಯಾರಾಪರ್ ಲಿಫ್ಟಿಂಗ್ನಲ್ಲಿ ಎರಡು ಪ್ರಯತ್ನದಲ್ಲಿ 430 ಕೆಜಿ ಎತ್ತಿದರು. ಈ ಮೂಲಕ 134.5 ಅಂಕ ಗಳಿಸಿ ಕೂಟ ದಾಖಲೆಯೊಂದಿಗೆ ಸ್ವರ್ಣ ಸಾಧನೆ ಮಾಡಿದರು.* ನೈಜೀರಿಯಾದ ಕ್ರಿಸ್ಟಿಯನ್ 133.6, ಸ್ಕಾಟ್ಲೆಂಡ್ನ ಮಿಕ್ಕಿ 13.9 ಅಂಕಗಳೊಂದಿಗೆ ಬೆಳ್ಳಿ, ಕಂಚು ಗೆದ್ದರು. ಕೂಟ ದಾಖಲೆ ಮಾಡಿದ ಸುಧೀರ್ ಅವರು ಮುಂದೆ ನಡೆಯುವ ಏಷ್ಯನ್ ಪ್ಯಾರಾ ಗೇಮ್ಸ್ಗೂ ಅರ್ಹತೆ ಪಡೆದರು.