Job Description: * 2022 ರ ಕಾಮನ್ ವೆಲ್ತ್ ಪುರುಷರ ಲಾಂಗ್ಜಂಪ್ನಲ್ಲಿ ಮುರಳಿ ಶ್ರೀಶಂಕರ್ 8.08 ಮೀ ಜಿಗಿಯುವ ಮೂಲಕ ಬೆಳ್ಳಿ ಗೆದ್ದ ಸಾಧನೆ ಮಾಡಿದ್ದಾರೆ.* ಮುರಳಿ ಕಾಮನ್ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಬೆಳ್ಳಿ ಗೆದ್ದ ಭಾರತದ ಮೊದಲ ಕ್ರೀಡಾಪಟು ಆಗಿದ್ದಾರೆ. * 1978 ರಲ್ಲಿ ಸುರೇಶ್ ಬಾಬು ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕಂಚು ಗೆದ್ದಿದ್ದರು.* ಲಕ್ವಾನ್ ನಾಯರ್ನ್ ಅವರು ಪ್ರಥಮ ಸ್ಥಾನ ಪಡೆಯುವ ಮೂಲಕ ಚಿನ್ನವನ್ನು ತಮ್ಮದಾಗಿಸಿಕೊಂಡರು.* ದಕ್ಷಿಣ ಆಫ್ರಿಕಾದ ಯುವಾನ್ ವಾನ್ ವುರೆನ್ ಕಂಚನ್ನು ಗೆದ್ದರು.* ಭಾರತದ ಮತೊಬ್ಬ ಸ್ಪರ್ಧಿಯಾಗಿರುವ ಮಹಮ್ಮದ್ ಅನೀಸ್ ಯಾಹ್ಯಾ 5 ನೇ ಸ್ಥಾನವನ್ನು ಪಡೆದುಕೊಂಡರು.* ಮಹಿಳೆಯರ ವಿಭಾಗದಲ್ಲಿ 2010 ನವ ದೆಹಲಿ ಕೂಟದಲ್ಲಿ ಪ್ರಜೂಷಾ ಬೆಳ್ಳಿಯನ್ನು ಮತ್ತು 2002 ಅಂಜಿ ಬಾಬು ಜಾರ್ಜ್ ಕಂಚು ಗೆದ್ದುಕೊಂಡಿದ್ದರು.* ಮುರಳಿ ಶ್ರೀಶಂಕರ್ ಗೆ ಇದು ಅಂತಾರಾಷ್ಟ್ರೀಯ ಕೂಟದಲ್ಲಿ ದೊರೆತ ಮೊದಲ ಪದಕವಾಗಿದೆ. * ಮುರಳಿ ಶ್ರೀಶಂಕರ್ ಗೆ 2018 ಏಷ್ಯನ್ ಅಂಡರ್- 20 ಚಾಂಪಿಯನ್ ಷಿಪ್ ನಲ್ಲಿ ಕಂಚು ಗೆದ್ದಿದ್ದರು.* 2022 ರಲ್ಲಿ ಕಾಮನ್ ವೆಲ್ತ್ ಬರ್ಮಿಂಗ್ ಹ್ಯಾಮ್ ನಲ್ಲಿ ಇಲ್ಲಿಯವರೆಗೆ ನಡೆದ ಗೇಮ್ಸ್ ನಲ್ಲಿ ಪದಕಗಳನ್ನು ಗೆಲ್ಲುವ ಪಟ್ಟಿಯಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ , ಕೆನಡಾ, ನ್ಯೂಜಲೆಂಡ್, ಸ್ಕಾಟ್ಲೆಂಡ್, ಭಾರತ ಕ್ರಮವಾಗಿ 1,2,3,4,5 ಮತ್ತು 6 ನೇ ಸ್ಥಾನದಲ್ಲಿವೆ.