Job Description: * ಭಾರತೀಯ ಜೀವ ವಿಮಾ ನಿಗಮವು ( ಎಲ್ ಐಸಿ ) ಫಾರ್ಚೂನ್ ನಿಯತಕಾಲಿಕ ಪ್ರಕಟಿಸಿರುವ ಜಗತ್ತಿನ ಪ್ರಮುಖ 500 ಕಂಪನಿಗಳ ಪಟ್ಟಿಯಲ್ಲಿ 98 ನೇ ಸ್ಥಾನವನ್ನು ಪಡೆದುಕೊಂಡಿದೆ. * ದೇಶದ ಅತಿದೊಡ್ಡ ವಿಮಾ ಕಂಪನಿಯ ವರಮಾನ 17.68 ಲಕ್ಷ ಕೋಟಿ ಇದ್ದು , ಲಾಭವು 1 4,375 ಕೋಟಿ ಆಗಿದೆ . * ಇತ್ತೀಚಿಗೆ IPO ಮೂಲಕ ಷೇರುಪೇಟೆಗೆ ಬಂದಿರುವ ಎಲ್‌ಐಸಿಯು ಫಾರ್ಚೂನ್ ಪಟ್ಟಿಯಲ್ಲಿ ಭಾರತದ ಇತರೆ ಕಂಪನಿಗಳಿಗಿಂತಲೂ ಉನ್ನತ ಸ್ಥಾನ LIC ಪಡೆದುಕೊಂಡಿದೆ.* 2022 ರ ಮಾರ್ಚ್ 31 ಕ್ಕೆ ಕೊನೆಗೊಂಡ ಹಣಕಾಸು ವರ್ಷಕ್ಕೆ ಕಂಪನಿಗಳ ಒಟ್ಟಾರೆ ವರಮಾನದ ಆಧಾರದ ಮೇಲೆ ಪಾರ್ಚೂನ್ ನಿಯತಕಾಲಿಕವು 500 ಕಂಪನಿಗಳ ಸ್ಥಾನಮಾನದ ವರದಿ ಸಿದ್ಧಪಡಿಸಿದೆ.* ಈ ವರದಿಯಲ್ಲಿ ವಾಲ್ ಮಾರ್ಟ್ ಮೊದಲ ಸ್ಥಾನದಲ್ಲಿದೆ. ಅಮೆಜಾನ್ ಎರಡನೇ ಸ್ಥಾನ ಪಡೆದುಕೊಂಡಿದೆ. ಭಾರತದ ಒಂಬತ್ತು ಕಂಪನಿಗಳು ಸ್ಥಾನ ಪಡೆದುಕೊಂಡಿವೆ. * ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯು 51 ಸ್ಥಾನ ಮೇಲಕ್ಕೇರಿದ್ದು, 104 ನೇ ಸ್ಥಾನಕ್ಕೆ ತಲುಪಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್( 142 ), ONGC( 190 ), ಟಾಟಾ ಸಮೂಹದ ಟಾಟಾ ಮೋಟರ್ಸ್ ( 370 ) ಮತ್ತು ಟಾಟಾ ಸ್ಟೀಲ್ ( 435 ) ಹಾಗೂ ರಾಜೇಶ್ ಎಕ್ಸ್‌ಪೋರ್ಟ್ಸ್ ( 437 ) ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. SBI, 236 ಮತ್ತು BPCL 295 ನೇ ಸ್ಥಾನದಲ್ಲಿವೆ .