Job Description: * 2021 ನೇ ಸಾಲಿನ ಹಿಂದೂ ಸಂಸ್ಥಾನ ನೀಡುವ ಸೌಹಾರ್ದ ಸಮ್ಮಾನ ಪ್ರಶಸ್ತಿಗೆ ಹಿರಿಯ ಸಾಹಿತಿ ಹಾಗೂ ಲೇಖಕರಾಗಿರುವ ಡಾ.ಲಕ್ಷ್ಮಿನಾರಾಯಣ ಆಯ್ಕೆ ಆಗಿದ್ದಾರೆ.* ಈ ಪ್ರಶಸ್ತಿಯು 2.5 ಲಕ್ಷ ನಗದು ಮತ್ತು ಪ್ರಶಸ್ತಿ ಪಾತ್ರವನ್ನು ಒಳಗೊಂಡಿದೆ.* ಡಾ.ಲಕ್ಷ್ಮಿನಾರಾಯಣ ಅವರು 6 ಕೃತಿಗಳನ್ನು ಬರೆದಿದ್ದಾರೆ ಮತ್ತು 17 ಕೃತಿಗಳನ್ನು ಅನುವಾದ ಮಾಡಿದ್ದಾರೆ.* ಡಾ.ಲಕ್ಷ್ಮಿನಾರಾಯಣ ಅವರು ಬೆಂಗಳೂರಿನ ಬಿ ಎಂ ಶ್ರೀ ಪ್ರತಿಷ್ಠಾನದ ಮಾಜಿ ಅಧ್ಯಕ್ಷರಾಗಿದ್ದರು.* ಇವರು ಡಿಸೆಂಬರ್ 2 ರಂದು ತುಮಕೂರಿನಲ್ಲಿ ಜನಿಸಿದರು. ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ ಎ ಪದವಿ ಪಡೆದುಕೊಂಡರು,ನಂತರ ಇವರು ವಿವಿಧ ಕಾಲೇಜುಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು.* 2006 ರಿಂದ 2007 ವರೆಗೆ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. * ಲೇಖಕ ಡಾ.ಲಕ್ಷ್ಮಿನಾರಾಯಣ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ, ಕುವೆಂಪು ಭಾಷಾ ಭಾರತೀಯ ವಿಶೇಷ ಪುರಸ್ಕಾರ ಹೀಗೆ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.