Job Description: * 'ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್' ನ ಸಾಂಸ್ಥಿಕ ಚೌಕಟ್ಟಿನಡಿಯಲ್ಲಿ ರಚಿಸಲಾದ ನೆಟ್‌ವರ್ಕ್ ಪ್ಲಾನಿಂಗ್ ಗ್ರೂಪ್, 3 ಪ್ರಮುಖ ರೈಲ್ವೆ ಯೋಜನೆಗಳನ್ನು ಪರಿಶೀಲಿಸಿದೆ ಮತ್ತು ಶಿಫಾರಸು ಮಾಡಿದೆ.* ಗೋರಖ್‌ ಪುರ ಕಂಟೋನ್ಮೆಂಟ್‌ - ವಾಲ್ಮೀಕಿನಗರ ರೈಲು ಮಾರ್ಗ ದ್ವಿಗುಣಗೊಳಿಸುವಿಕೆ, ಕತಿಹಾರ್ - ಮುಕುರಿಯಾ ಮತ್ತು ಕತಿಹಾರ್ - ಕುಮೇದ್ಪುರ ಮಾರ್ಗ ದ್ವಿಗುಣಗೊಳಿಸುವಿಕೆ, ಮತ್ತು ಪಚೋರಾ – ಜಾಮ್ ನಗರ್ ಗೇಜ್ ಪರಿವರ್ತನೆ ಮತ್ತು ಬೋಡ್ವಾಡ್ವರೆಗೆ ವಿಸ್ತರಣೆ ಸೇರಿವೆ.* ಎಲ್ಲಾ ಮೂರು ಯೋಜನೆಗಳು ಒಳನಾಡಿನಲ್ಲಿ ಸರಕುಗಳ ವೇಗದ ಸಂಚಾರವನ್ನು ಖಾತ್ರಿಪಡಿಸುವ ದೃಷ್ಟಿಯಿಂದ ಬಹಳ ಮುಖ್ಯವಾಗಿದ್ದು, ಇದು ಸಾಗಾಣಿಕೆಯ ದಕ್ಷತೆಯನ್ನು ವೃದ್ಧಿಗೊಳಿಸುತ್ತದೆ ಮತ್ತು ವೆಚ್ಚದಲ್ಲಿ ಕಡಿತವನ್ನು ಮಾಡುತ್ತದೆ.* 3000 ಮಿಲಿಯನ್ ಮೆಟ್ರಿಕ್ ಟನ್ ಸರಕು ಸಾಗಣೆಯ ಗುರಿಯನ್ನು ಸಾಧಿಸಲು ರೈಲ್ವೆ ಮಾರ್ಗಗಳ 'ಹೆಚ್ಚಿನ ಸಾಂದ್ರತೆಯ ಜಾಲ'ವನ್ನು ಸಚಿವಾಲಯವು ಗುರುತಿಸಿದೆ.* ಆ ಕಾರ್ಯಾಚರಣೆಯ ಭಾಗವಾಗಿ, 3 ನಿರ್ಣಾಯಕ ಪ್ರಮುಖ ಯೋಜನೆಗಳನ್ನು ಈ ಕೆಳಗಿನಂತೆ ಗುರುತಿಸಲಾಗಿದೆ :I. ಗೋರಖ್‌ ಪುರ ಕಂಟೋನ್ಮೆಂಟ್‌ - ವಾಲ್ಮೀಕಿನಗರ ರೈಲು ಮಾರ್ಗವನ್ನು ದ್ವಿಗುಣಗೊಳಿಸುವುದು.II. ಕತಿಹಾರ್ - ಮುಕುರಿಯಾ ಮತ್ತು ಕತಿಹಾರ್ - ಕುಮೇದ್ಪುರ್ ಡಬ್ಲಿಂಗ್.III. ಪಚೋರಾ - ಜಾಮ್ನರ್ ಗೇಜ್ ಪರಿವರ್ತನೆ ಮತ್ತು ಬೋಡ್ವಾಡ್ ವರೆಗೆ ವಿಸ್ತರಣೆ.