Job Description: * ಡಾರ್ನಿಯರ್ 228 ವಿಮಾನದ ಮೂಲಕ ಭಾರತದ ನೌಕಾಪಡೆಯ 5 ಮಹಿಳಾ ಅಧಿಕಾರಿಗಳ ತಂಡವು ಅರಬ್ಬೀ ಸಮುದ್ರದ ಉತ್ತರ ಭಾಗದಲ್ಲಿ ಮೊದಲ ಭಾರಿಗೆ ಸ್ವತಂತ್ರವಾಗಿ ಸ್ಥಳಾನ್ವೇಷಣೆ ಮತ್ತು ಕಣ್ಗಾವಲು ಕಾರ್ಯಾಚರಣೆ ನಡೆಸಿದರು.* ಲೆಫ್ಟಿನೆಂಟ್ ಅಂಚಲ್ ಶರ್ಮಾ ನೇತೃತ್ವದ 5 ನೌಕಾಪಡೆಯ ಮಹಿಳಾ ಅಧಿಕಾರಿಗಳ ತಂಡವು ಈ ಸಾಧನೆ ಮಾಡುವ ಮೂಲಕ ಇತಿಹಾಸ ಬರೆದಿದೆ. * ಭಾರತದ ನೌಕಾಪಡೆಯ ಲೆಫ್ಟಿನೆಂಟ್ ಅಂಚಲ್ ಶರ್ಮಾ, ಶಿವಂಗಿ, ಅಪೂರ್ವಗಿತೇ, ಪೂಜಾ ಪಾಂಡಾ ಮತ್ತು ಪೂಜಾ ಶೇಖಾವತ್ ತಂಡದಿಂದ ಈ ಸಾಧನೆ ನಡೆದಿದೆ.* ಭಾರತದ ನೌಕಾಪಡೆಯ ಕಮಾಂಡರ್ ಆಗಿರುವ ವಿವೇಕ್ ಮಾಧವಳ್ ಅವರು ಈ 5 ಮಹಿಳೆಯರಿಗೆ ಒಂದು ತಿಂಗಳು ತರಬೇತಿ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.