Job Description: * 2022 ರ ಬರ್ಮಿಂಗ್‌ಹ್ಯಾಮ್‌ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟ-2022 ರ ವೇಟ್‌ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಗುರುದೀಪ್ ಸಿಂಗ್ ಅವರು ಕಂಚಿನ ಪದಕವನ್ನು ಪಡೆದರು.* 109 ಕೆಜಿ ವಿಭಾಗದ ಪುರುಷರ ಭಾರ ಎತ್ತುವ ಸ್ಪರ್ಧೆಯಲ್ಲಿ ಗುರುದೀಪ್ ಸಿಂಗ್ ಕಂಚಿನ ಪದಕ ಗೆದ್ದಿದ್ದಾರೆ.* ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಅಥ್ಲೀಟ್ ತೇಜಸ್ವಿನ್ ಶಂಕರ್ ಪುರುಷರ ಹೈಜಂಪ್ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ.* ತೇಜಸ್ವಿನ್ ಶಂಕರ್ ಹೈಜಂಪ್ ವಿಭಾಗದಲ್ಲಿ 2.22 ಮೀ ಜಿಗಿದು ಕಾಮನ್‌ವೆಲ್ತ್ ಗೇಮ್ಸ್ ನ ಹೈಜಂಪ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದ ಮೊದಲಿಗರಾಗಿದ್ದಾರೆ.* ಇಲ್ಲಿಯವರೆಗೆ ಭಾರತದ ಒಟ್ಟಾರೆ ಪದಕದ ಸಂಖ್ಯೆ 18ಕ್ಕೇರಿದ್ದು 5 ಚಿನ್ನ, 6 ಬೆಳ್ಳಿ ಮತ್ತು 8 ಕಂಚು ಸೇರಿದೆ.