Job Description: * ಕೆಂಪುಕೋಟೆಯಿಂದ ವಿಜಯ್ ಚೌಕ್ ವರೆಗೆ ಸಂಸದರ ‘ಹರ್ ಘರ್ ತಿರಂಗಾ’(ಮನೆಮನೆಯಲ್ಲಿ ತ್ರಿವರ್ಣ ಧ್ವಜ) ಬೈಕ್ ರ‍್ಯಾಲಿಗೆ ಉಪರಾಷ್ಟ್ರಪತಿಗಳು ಚಾಲನೆ ನೀಡಿದರು.* ಭಾರತದ ನಾಗರಿಕರು ಮತ್ತು ರಾಷ್ಟ್ರಧ್ವಜದ ನಡುವೆ ವೈಯಕ್ತಿಕ ಸಂಪರ್ಕವನ್ನು ಬೆಳೆಸಲು ಭಾರತ ಸರ್ಕಾರದ ಉಪಕ್ರಮವಾದ ‘ಹರ್ ಘರ್ ತಿರಂಗಾ’ದ ಜಾಗೃತಿಯನ್ನು ಹೆಚ್ಚಿಸಲು ಸಂಸ್ಕೃತಿ ಸಚಿವಾಲಯವು ಈ ರ‍್ಯಾಲಿಯನ್ನು ಆಯೋಜಿಸಿದೆ.* ಬೈಕ್ ರ‍್ಯಾಲಿಯಲ್ಲಿ ಕೇಂದ್ರದ ವಿವಿಧ ಸಚಿವರು ಭಾಗವಹಿಸಿದ್ದರು.