Job Description: * 2022 ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಆರನೇ ದಿನದಂದು ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಭಾರತಕ್ಕೆ ವೇಟ್‌ ಲಿಪ್ಟರ್ 'ಲವಪ್ರಿತ್' ಒಂದು ಕಂಚಿನ ಪದಕ ತಂದಿದ್ದಾರೆ.* 2022 ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ 14 ನೇ ಪದಕ ಇದಾಗಿದೆ * 24 ರ ವಯಸ್ಸಿನ ವೇಟ್‌ಲಿಫ್ಟರ್‌ ಲವ್‌ಪ್ರೀತ್‌ ಸಿಂಗ್ ಅವರು ಪುರುಷರ ವಿಭಾಗದಲ್ಲಿ 109 ಕೆ.ಜಿ ಯೆತ್ತುವ ಮೂಲಕ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.* ದಿ ನ್ಯಾಷನಲ್‌ ಎಕ್ಸಿಬಿಷನ್‌ ಸೆಂಟರ್‌ನಲ್ಲಿ ನಡೆದ 109 ಕೆ.ಜಿ ಪ್ರಶಸ್ತಿ ಸುತ್ತಿನ ಹಂತದ ಸ್ನ್ಯಾಚ್‌ ವಿಭಾಗದಲ್ಲಿ 163 ಕೆ.ಜಿ ಹಾಗೂ ಕ್ಲೀನ್‌ ಅಂಡ್‌ ಜೆರ್ಕ್‌ ವಿಭಾಗದಲ್ಲಿ 192 ಕೆ.ಜಿ ಸೇರಿದಂತೆ ಒಟ್ಟಾರೆ 355 ಕೆ.ಜಿ ಸಂಯೋಜನೆಯೊಂದಿಗೆ ಭಾರತೀಯ ವೇಟ್‌ ಲಿಫ್ಟರ್‌ ಕಂಚಿನ ಪದಕಕ್ಕೆ ತೃಪ್ತರಾದರು.