Job Description: * ಗುಜರಾತ್‌ನ ಸಾಬರ್‌ಕಾಂಠಾದ ಗಧೋಡಾ ಚೌಕಿಯಲ್ಲಿರುವ ಸಾಬರ್ ಡೈರಿಯಲ್ಲಿ 1,000 ರೂ.ಗಳಿಗೂ ಹೆಚ್ಚಿನ ಮೌಲ್ಯದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ. * ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸಲು ಹಾಗೂ ಸ್ಥಳೀಯ ರೈತರು ಮತ್ತು ಹಾಲು ಉತ್ಪಾದಕರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುವ ಉದ್ದೇಶವು ಈ ಯೋಜನೆಗಳಾಗಿದೆ. * * ಯೋಜನೆಗಳ ವಿವರ : - * ದಿನಕ್ಕೆ ಸುಮಾರು 120 ಮೆಟ್ರಿಕ್ ಟನ್ (ಎಂ.ಟಿ.ಪಿ.ಡಿ) ಸಾಮರ್ಥ್ಯದ ʻಪೌಡರ್ ಪ್ಲಾಂಟ್ʼ (ಹಾಲಿನ ಪುಡಿ ಘಟಕ) ಅನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು. * ಇಡೀ ಯೋಜನೆಯ ಒಟ್ಟು ವೆಚ್ಚ 300 ಕೋಟಿ ರೂ.ಗಳಿಗೂ ಅಧಿಕ. ಸ್ಥಾವರವು ಇತ್ತೀಚಿನ ಮತ್ತು ಸಂಪೂರ್ಣ ಸ್ವಯಂಚಾಲಿತ ʻಬಲ್ಕ್ ಪ್ಯಾಕಿಂಗ್ ಲೈನ್ʼ ಅನ್ನು ಹೊಂದಿದೆ. * ಪ್ರಧಾನಮಂತ್ರಿಯವರು ಸಾಬರ್ ಡೈರಿಯಲ್ಲಿ ಅಸೆಪ್ಟಿಕ್ ಹಾಲಿನ ಪ್ಯಾಕೇಜಿಂಗ್ ಘಟಕವನ್ನು ಸಹ ಉದ್ಘಾಟಿಸಿದರು. * ಇದು ದಿನಕ್ಕೆ 3 ಲಕ್ಷ ಲೀಟರ್ ಸಾಮರ್ಥ್ಯವನ್ನು ಹೊಂದಿರುವ ಅತ್ಯಾಧುನಿಕ ಘಟಕವಾಗಿದೆ. ಈ ಯೋಜನೆಯನ್ನು ಸುಮಾರು 125 ಕೋಟಿ ರೂ.ಗಳ ಹೂಡಿಕೆ. * 15 ರಂದು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಸರಕಾರವು ʻಜನಜಾತಿಯ ಗೌರವ್ ದಿವಸ್ʼ ಎಂದು ಘೋಷಿಸಿದೆ ಎಂದು ಪ್ರಧಾನಮಂತ್ರಿ ಅವರು ಮಾಹಿತಿ ನೀಡಿದರು. * ಪ್ರಧಾನಮಂತ್ರಿಯವರು ಸಾಬರ್ ಚೀಸ್ ಮತ್ತು ವ್ಹೇ ಡ್ರೈಯಿಂಗ್ ಪ್ಲಾಂಟ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಯ ಅಂದಾಜು ವೆಚ್ಚ ಸುಮಾರು 600 ಕೋಟಿ ರೂ.ಗಳಾಗಿದೆ. * ಸಾಬರ್ ಡೈರಿಯು ʻಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟʼದ (ಜಿ.ಸಿ.ಎಂ.ಎಂ.ಎಫ್) ಒಂದು ಭಾಗವಾಗಿದ್ದು, ʻಅಮೂಲ್ʼ ಬ್ರಾಂಡ್ ಅಡಿಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಸಂಪೂರ್ಣ ಶ್ರೇಣಿಯನ್ನು ತಯಾರಿಸುತ್ತದೆ ಹಾಗೂ ಮಾರಾಟ ಮಾಡುತ್ತದೆ.