Job Description: * ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ಇಸ್ರೋ ) ಜಾಗತಿಕ ಗ್ರಾಹಕರ ಉಪಗ್ರ ಹಗಳನ್ನು ಉಡಾವಣೆ ಮಾಡುವ ಮೂಲಕ 2,229 ಕೋಟಿ ( 279 ಮಿಲಿಯನ್ ಡಾಲರ್ ) ಗಳಿಸಿದ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಲೋಕಸಭೆಯಲ್ಲಿ ಇತ್ತೀಚಿಗೆ ತಿಳಿಸಿದ್ದಾರೆ. * ಈ ಕುರಿತ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು, ಇಸ್ರೋ ತನ್ನ ವಾಣಿಜ್ಯ ಉದ್ದೇಶದ ಅಂಗ ಸಂಸ್ಥೆಯ ಸಹಭಾಗಿತ್ವದಲ್ಲಿ PSLV ನೌಕೆಯ ಮೂಲದ 34 ದೇಶಗಳ 345 ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಈ ಮೂಲಕ ಒಟ್ಟಾರೆಯಾಗಿ 279 ಮಿಲಿಯನ್ ಡಾಲರ್ ಹಣವನ್ನು ಗಳಿಸಿದೆ ಎಂದು ಹೇಳಿದ್ದಾರೆ.* ಇಸ್ರೋ , ಇತ್ತೀಚೆಗೆ ಜೂನ್ 30 ರಂದು PSLV A53 ಬಾಹ್ಯಾಕಾಶ ನೌಕೆಯ ಮೂಲಕ ಸಿಂಗಪುರದ ಮೂರು ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸಿದೆ.