Job Description: * ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021 ರಲ್ಲಿ ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ, ಸರ್ಕಾರದ ಯೋಜನೆಗಳನ್ನು ಗರಿಷ್ಠಮಟ್ಟಕ್ಕೆ ತಲುಪಿಸಲು ಕರೆ ನೀಡಿದ್ದರು. * ಕೇಂದ್ರ ಸಚಿವ ಸಂಪುಟ ಇಂದು ದೇಶಾದ್ಯಂತ ವ್ಯಾಪ್ತಿಗೆ ಒಳಪಡದ ಹಳ್ಳಿಗಳಲ್ಲಿ ಒಟ್ಟು 26,316 ಕೋಟಿ ರೂ.ಗಳ ವೆಚ್ಚದಲ್ಲಿ 4ಜಿ ಮೊಬೈಲ್ ಸೇವೆಗಳನ್ನು ಪೂರೈಸುವ ಯೋಜನೆಗೆ ತನ್ನ ಅನುಮೋದನೆ ನೀಡಿದೆ.* ಸರ್ವರಿಗೂ ಸಂಪರ್ಕ ಮತ್ತು ಡಿಜಿಟಲ್ ಸೇರ್ಪಡೆ ಸರ್ಕಾರದ 'ಅಂತ್ಯೋದಯ' ನಿಲುವಿನ ಅವಿಭಾಜ್ಯ ಅಂಗವಾಗಿದೆ. * ಈ ಯೋಜನೆಯು ದೂರದ ಮತ್ತು ದುರ್ಗಮ ಪ್ರದೇಶಗಳಲ್ಲಿನ 24,680 ಹಳ್ಳಿಗಳಲ್ಲಿ 4 ಜಿ ಮೊಬೈಲ್ ಸೇವೆಗಳನ್ನು ಒದಗಿಸುತ್ತದೆ. ಪುನರ್ವಸತಿ, ಹೊಸ-ವಸಾಹತುಗಳು, ಅಸ್ತಿತ್ವದಲ್ಲಿರುವ ಆಪರೇಟರ್ ಗಳು ಸೇವೆಗಳನ್ನು ಹಿಂತೆಗೆದುಕೊಂಡಿರುವ ಮೊದಲಾದ ಕಾರಣಗಳಿಗಾಗಿ ಶೇ.20 ಹೆಚ್ಚುವರಿ ಗ್ರಾಮಗಳನ್ನು ಸೇರಿಸಿಕೊಳ್ಳುವ ಅವಕಾಶವನ್ನು ಈ ಯೋಜನೆ ಹೊಂದಿದೆ. ಇದಲ್ಲದೆ, ಕೇವಲ 2ಜಿ/3ಜಿ ಸಂಪರ್ಕ ಹೊಂದಿರುವ 6,279 ಗ್ರಾಮಗಳನ್ನು 4ಜಿಗೆ ಮೇಲ್ದರ್ಜೆಗೇರಿಸಲಾಗುವುದು.* ಆತ್ಮನಿರ್ಭರ ಭಾರತದ 4ಜಿ ತಂತ್ರಜ್ಞಾನ ಸ್ಟ್ಯಾಕ್ ಅನ್ನು ಬಳಸಿಕೊಂಡು BSNL ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತದೆ. * ಈ ಯೋಜನೆಯು ವಿವಿಧ ಇ-ಆಡಳಿತ ಸೇವೆಗಳು, ಬ್ಯಾಂಕಿಂಗ್ ಸೇವೆಗಳು, ಟೆಲಿ-ಮೆಡಿಸಿನ್, ಟೆಲಿ-ಶಿಕ್ಷಣ ಇತ್ಯಾದಿಗಳನ್ನು ಮೊಬೈಲ್ ಬ್ರಾಡ್ ಬ್ಯಾಂಡ್ ಮೂಲಕ ತಲುಪಿಸುವುದನ್ನು ಉತ್ತೇಜಿಸುತ್ತದೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗವನ್ನು ಸೃಷ್ಟಿಸುತ್ತದೆ.