Job Description: * ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಭಾರತದಲ್ಲಿ ಆಯೋಜಿಸಿರುವ 17 ವರ್ಷದೊಳಗಿನವರ ಮಹಿಳಾ ವಿಶ್ವಕಪ್ 2022 ಕ್ಕೆ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಘಟನೆ (ಫಿಫಾ) ಅಂತಾರಾಷ್ಟ್ರೀಯ ಫುಟ್ಬಾಲ್ ಸಂಘಟನೆ (ಫಿಫಾ) ಗೆ ನೀಡುವ ಖಾತರಿಗೆ ಸಹಿ ಹಾಕಲು ಅನುಮೋದನೆ ನೀಡಿದೆ.* 17 ವರ್ಷದೊಳಗಿನವರ ಫಿಫಾ ಮಹಿಳಾ ವಿಶ್ವಕಪ್ 2022, ಭಾರತದಲ್ಲಿ 2022 ರ ಅಕ್ಟೋಬರ್ 11 ರಿಂದ 30ರವರೆಗೆ ನಡೆಯಲಿದೆ.* ದ್ವೈವಾರ್ಷಿಕ ಯುವ ಪಂದ್ಯಾವಳಿಯ ಏಳನೇ ಆವೃತ್ತಿಯು ಭಾರತವು ಆಯೋಜಿಸುತ್ತಿರುವ ಮೊದಲ ಫಿಪಾ ಮಹಿಳಾ ಕ್ರೀಡಾಕೂಟವಾಗಿದೆ.* ಅಖಿಲ ಭಾರತ ಫುಟ್ಬಾಲ್ ಸಂಘಟನೆ ಈ ಕ್ರೀಡಾಂಗಣಕ್ಕೆ ತಗಲುವ ವೆಚ್ಚದ ಸಲುವಾಗಿ 10 ಕೋಟಿ ರೂ. ಆರ್ಥಿಕ ನೆರವು ನೀಡಲಾಗುವುದು. ಇದನ್ನು ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ (ಎನ್‌ ಎಸ್‌ ಎಫ್‌) ಗಳಿಗೆ ನೆರವು ಯೋಜನೆಯ ಬಜೆಟ್ ಹಂಚಿಕೆಯಿಂದ ಭರಿಸಲಾಗುವುದು.* 17 ವರ್ಷದೊಳಗಿನರ ಫಿಫಾ ಮಹಿಳಾ ವಿಶ್ವಕಪ್, 17 ಅಥವಾ 17 ವರ್ಷದೊಳಗಿನ ಮಹಿಳಾ ಆಟಗಾರರಿಗೆ ಫಿಫಾ ಆಯೋಜಿಸುವ ವಿಶ್ವ ಚಾಂಪಿಯನ್‌ಶಿಪ್ ಆಗಿದೆ. * ಈ ಚಾಂಪಿಯನ್‌ಶಿಪ್ 2008 ರಲ್ಲಿ ಪ್ರಾರಂಭವಾಯಿತು ಮತ್ತು ಸಾಂಪ್ರದಾಯಿಕವಾಗಿ ಸಮ-ಸಂಖ್ಯೆಯ ವರ್ಷಗಳಲ್ಲಿ ನಡೆಯುತ್ತದೆ. * ವಿಶ್ವಕಪ್‌ನ 6 ನೇ ಆವೃತ್ತಿಯು ಉರುಗ್ವೆಯಲ್ಲಿ 2018ರ ನವೆಂಬರ್ 13 ರಿಂದ ಡಿಸೆಂಬರ್ 1 ರವರೆಗೆ ನಡೆಯಿತು. * ಪ್ರಸ್ತುತ ಸ್ಪೇನ್ ದೇಶವು 17 ವರ್ಷದೊಳಗಿನರ ಫಿಫಾ ಮಹಿಳಾ ವಿಶ್ವಕಪ್ ಚಾಂಪಿಯನ್‌ ಆಗಿದೆ. ಭಾರತದಲ್ಲಿ ನಡೆಯುತ್ತಿರುವ 17 ವರ್ಷದೊಳಗಿನರ ಫಿಫಾ ಮಹಿಳಾ ವಿಶ್ವಕಪ್ 7 ನೇ ಆವೃತ್ತಿಯಾಗಿದ್ದು, ಇದರಲ್ಲಿ ಭಾರತ ಸೇರಿದಂತೆ 16 ತಂಡಗಳು ಭಾಗವಹಿಸಲಿವೆ. * ಎ ಐ ಎಫ್‌ ಎಫ್‌ 3 ಸ್ಥಳಗಳಲ್ಲಿ ಸ್ಪರ್ಧೆಯ ಪಂದ್ಯಗಳನ್ನು ನಡೆಸಲು ಪ್ರಸ್ತಾಪಿಸಿದೆ. ಅವುಗಳೆಂದರೆ; (ಎ) ಭುವನೇಶ್ವರ (ಬಿ) ನವಿ ಮುಂಬೈ ಮತ್ತು (ಸಿ) ಗೋವಾ. 2017 ರ ಅಕ್ಟೋಬರ್ 6 ರಿಂದ 28 ರವರೆಗೆ ದೇಶದ 6 ವಿಭಿನ್ನ ಸ್ಥಳಗಳಾದ ನವದೆಹಲಿ, ಗುವಾಹಟಿ, ಮುಂಬೈ, ಗೋವಾ, ಕೊಚ್ಚಿ ಮತ್ತು ಕೋಲ್ಕತ್ತಾದಲ್ಲಿ 17 ವರ್ಷದೊಳಗಿನರ ಫಿಫಾ ಪುರುಷರ ವಿಶ್ವಕಪ್ ಅನ್ನು ಭಾರತವು ಯಶಸ್ವಿಯಾಗಿ ಆಯೋಜಿಸಿತ್ತು.