Job Description: * ಇಂದು ಕಾಮನ್ ವೆಲ್ತ್ ಕ್ರೀಡಾಕೂಟವು ಅಲೆಕ್ಸಾಂಡರ್ ಸ್ಟೇಡಿಯಂ, ಭರ್ಮಿಂಗ್ ಹಾಂ ದಲ್ಲಿ ಉದ್ಘಾಟನೆಯಾಗಲಿದೆ. * ಇಂದಿನಿಂದ ಪ್ರಾರಂಭವಾದ ಈ ಕ್ರೀಡಾ ಹಬ್ಬ12 ದಿನಗಳವರೆಗೆ ನಡೆಯಲಿದೆ.* 22 ನೇ ಆವೃತ್ತಿಯಾದ ಕಾಮನ್ ವೆಲ್ತ್ ಕ್ರೀಡಾಕೂಟವನ್ನು ನಡೆಸಿಕೊಡಲು ಇಂಗ್ಲೆಂಡ್ ಸಜ್ಜಾಗಿದೆ.* ಈ ಕ್ರೀಡಾಕೂಟದಲ್ಲಿ 111 ಪುರುಷರು , 104 ಮಹಿಳೆಯರ ಸಹಿತ ಭಾರತ ಒಟ್ಟು 215 ಕ್ರೀಡಾಪಟುಗಳ ತಂಡದೊಂದಿಗೆ ಕಣಕ್ಕಿಳಿಯಲಿದ್ದು,16 ಕ್ರೀಡೆಗಳಲ್ಲಿ ಸ್ಪರ್ಧಿಸಲಿದೆ.* * 22 ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 72 ದೇಶಗಳು,* 5054 ಕ್ರೀಡಾಪಟುಗಳು,* 20 ಕ್ರೀಡೆಗಳು,* 280 ಸ್ವರ್ಣ ಸ್ಪರ್ಧೆ,* 12 ದಿನಗಳು,* 15 ಕ್ರೀಡಾಂಗಣಗಳು,* 215 ಭಾರತದ ಸ್ಪರ್ಧಿಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.* ದೆಹಲಿಯಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ 38 ಚಿನ್ನ, 27 ಬೆಳ್ಳಿ, 36 ಕಂಚಿನ, 101 ಪದಕ ಜಯಿಸಿದ್ದು ಕೂಟದ ಇತಿಹಾಸದಲ್ಲಿ ಭಾರತದ ಸರ್ವಶ್ರೇಷ್ಠ ನಿರ್ವಹಣೆಯಾಗಿದೆ. * ಹಿಂದಿನ 2018 ರ ಗೋಲ್ಡ್ ಕೋಸ್ಟ್ ಗೇಮ್ಸ್‌ನಲ್ಲಿ ಭಾರತ 26 ಚಿನ್ನ , 20 ಬೆಳ್ಳಿ ಮತ್ತು 20 ಕಂಚಿನ ಸಹಿತ ಒಟ್ಟು 66 ಪದಕ ಜಯಿಸಿತ್ತು. ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ , 2 ಬೆಳ್ಳಿ , 4 ಕಂಚಿನ ಸಹಿತ 7 ಪದಕವನ್ನು ಪಡೆದುಕೊಂಡಿದೆ. * ನೀರಜ್ ಚೋಪ್ರಾ ಅವರು ಗೈರು ಇರುವ ಕಾರಣ ಒಲಿಂಪಿಕ್ಸ್ ಅವಳಿ ಪದಕ ವಿಜೇತ ಬ್ಯಾಡ್ಮಿಂಟನ್ ತಾರೆಯಾದ ಪಿವಿ ಸಿಂಧುಗೆ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗುವ ಅವಕಾಶ ಒಲಿದಿದೆ.* 2018 ರ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ ನಲ್ಲೂ ಪಿವಿ ಸಿಂಧು ಭಾರತದ ಧ್ವಜಧಾರಿಯಾಗಿದ್ದರು.* ಆರಂಭೋತ್ಸವದ ಪಥ ಸಂಚಲನದಲ್ಲಿ ಭಾರತದಿಂದ ಗರಿಷ್ಠ 164 ಮಂದಿ ಭಾಗವಹಿಸಲು ಅವಕಾಶ ಲಭಿಸಿದೆ ಎಂದು ಭಾರತ ತಂಡದ ಚೀಪ್ ಡಿ ಮಿಷನ್ ರಾಜೇಶ್ ಭಂಡಾರಿ ತಿಳಿಸಿದ್ದಾರೆ.** ಕಾಮನ್ವೆಲ್ತ್‌ನಲ್ಲಿ ಕನ್ನಡಿಗರು* ಅಶ್ವಿನಿ ಪೊನ್ನಪ್ಪ(ಬ್ಯಾಡ್ಮಿಂಟನ್)* ಶ್ರೀಹರಿ ನಟರಾಜ್(ಈಜು)* ಡಿಪಿ ಮನು (ಜಾವೆಲಿನ್)* ರಾಜೇಶ್ವರಿ ಗಾಯಕ್ವಾಡ್ ( ಕ್ರಿಕೆಟ್ ) * ಗುರುರಾಜ್ ಪೂಜಾರಿ ( ವೇಟ್ ಲಿಫ್ಟಿಂಗ್ )* ವೆಂಕಪ್ಪ ಕೆಂಗಲಗುತ್ತಿ ( ಸೈಕ್ಲಿಂಗ್ )* ಎನ್ಎಸ್ ಸಿಮಿ ( 4/100 ರಿಲೇ )* ಈ ಭಾರಿ ಆತಿಥೇಯ ಬರ್ಮಿಂಗ್ ಹ್ಯಾಮ್ ನಲ್ಲಿ ಸೂಕ್ತ ರೇಂಜ್ ವ್ಯವಸ್ಥೆ ಇಲ್ಲದ ಕಾರಣ ಶೂಟಿಂಗ್ ಸ್ಪರ್ಧೆಯನ್ನೇ ಕೈ ಬಿಡಲಾಗಿದೆ.* ಕಳೆದ ಗೋಲ್ಡ್ ಕೋಸ್ಟ್ ಗೇಮ್ಸ್ ನಲ್ಲಿ ಭಾರತೀಯ ಶೂಟರ್ ಗಳು 7 ಚಿನ್ನ, 4 ಬೆಳ್ಳಿ, 5 ಕಂಚು ಜಯಿಸಿದ್ದರು.* ಭಾರತದ ಆವೃತ್ತಿಗಳ ಪದಕ ಪಟ್ಟಿಯಲ್ಲಿ ಅಗ್ರ 5ರೊಳಗೆ ಸ್ಥಾನದ ಗುರಿಯನ್ನು ಹೊಂದಿದೆ. ಪ್ರತಿ ವರ್ಷವೂ ಅಗ್ರ ರೊಳಗೆ ಸ್ಥಾನ ಪಡೆಯುವ ಗುರಿ ಇಟ್ಟು ಕೊಳ್ಳುತ್ತಿತ್ತು. ಆದರೆ ಈ ಬಾರಿ ಶೂಟಿಂಗ್ ಇಲ್ಲದ ಕಾರಣ ಅಗ್ರ 5ರೊಳಗೆ ಸ್ಥಾನ ಸಂಪಾದಿಸಲು ಹೋರಾಡಬೇಕಿದೆ. * ಈ ಬಾರಿಯ ಕ್ರೀಡಾಕೂಟದ ಪದಕಗಳನ್ನು ಅಂಬರ್ ಅಲಿಸ್ ಫ್ರಾನ್ಸೆಸ್ಕಾ ವಿಲ್‌ಕಾಕ್ಸ್ ಮತ್ತು ಕ್ಯಾತರಿನಾ ರಾಡ್ರಿಗಸ್ ಸಿಯೆರೊ ಎಂಬ ವಿದ್ಯಾರ್ಥಿಗಳು ವಿನ್ಯಾಸ ಮಾಡಿದ್ದಾರೆ. ಉತ್ತಮ ಗುಣಮಟ್ಟದಿಂದ ಕೂಡಿದ ಈ ಪದಕಗಳ ಸ್ಪರ್ಶದ ಅಮಭೂತಿಯನ್ನು ಅಂಧ ಕ್ರೀಡಾಪಟುಗಳೂ ಅನುಭವಿಸಬಹುದಾಗಿದೆ. * *ಗೇಮ್ಸ್ ಇತಿಹಾಸ : ಪ್ರತಿ 4 ವರ್ಷಕ್ಕೊಮ್ಮೆ ಆಯೋಜನೆ ಯಾಗುವ ಕಾಮನ್ವೆಲ್ತ್ ಗೇಮ್ಸ್ ಮೊದಲು ಆರಂಭವಾಗಿದ್ದು 1930 ರಲ್ಲಿ. ಬ್ರಿಟಿಷ್ ವಸಾಹತುಗಳಾ ಗಿದ್ದ ದೇಶಗಳು ಈ ಕೂಟದಲ್ಲಿ ಭಾಗವಹಿಸುತ್ತವೆ. ಕೆನಡದಲ್ಲಿ ಮೊದಲ ಕ್ರೀಡಾಕೂಟ ನಡೆದಿತ್ತು. 1930 ರಿಂದ 1950 ರವರೆಗೆ ಬ್ರಿಟಿಷ್ ಎಂಪೈರ್ ಗೇಮ್ಸ್, 1954 ರಿಂದ 74 ರವರೆಗೆ ಬ್ರಿಟಿಷ್ ಕಾಮನ್ವೆಲ್ತ್ ಗೇಮ್ಸ್ ಎನ್ನಲಾಗಿತ್ತು . 1978 ರಿಂದ ಈಗಿರುವ ಕಾಮನ್ವೆಲ್ತ್ ಗೇಮ್ಸ್ ಎನ್ನುವ ಹೆಸರಿನಿಂದ ಗುರುತಿಸಿಕೊಂಡಿದೆ.* ಚೊಚ್ಚಲ ಕೂಟವನ್ನು ಆಯೋಜಿಸಿದ್ದು ಕೆನಡಾದ ಹ್ಯಾಮಿಲ್ಸನ್ ಹ್ಯಾಮಿಲ್ಟನ್ ನಗರ , ಕೆನಡಾದ ಪತ್ರಕರ್ತ ಮೆಲ್ವಿಲ್ಲೆ ಮಾರ್ಕ್ಸ್ ರಾಬಿನ್ಸನ್ ಅವರನ್ನು ಗೇಮ್ಸ್‌ನ ಜನಕ ಎಂದು ಕರೆ ಯಲಾಗುತ್ತದೆ . ಬ್ರಿಟಿಷರು ಆಳಿದ ದೇಶಗಳಲ್ಲಿ, ಹಬ್ಬಗಳ ವೇಳೆ ಆಯೋಜಿಸುವ ಆಟಗಳಿಂದ ಸ್ಫೂರ್ತಿ ಪಡೆದು ಕಾಮನ್‌ವೆಲ್ತ್ ಗೇಮ್ಸ್ ಶುರುವಾದವು.