Job Description: * ಇತ್ತೀಚಿಗೆ ಛತ್ತೀಸಗಡ ಸರ್ಕಾರವು ಕೀಟ ನಿಯಂತ್ರಣ ಉತ್ಪನ್ನ ತಯಾರಿಸಲು ಗೋ ಪಾಲಕರಿಂದ ಗೋ ಮೂತ್ರವನ್ನು ಖರೀದಿಸಲಿದೆ ಎಂದು ಅಧಿಕಾರಿಗಳು ತಿಳಿಸಿದರು. * ಕರ್ಸಾ ಗ್ರಾಮದಲ್ಲಿ ಆಯೋಜಿಸಿರುವ ಸ್ಥಳೀಯ ಹಬ್ಬ ವಾಗಿರುವ ' ಹರೇಲಿ 'ಯಲ್ಲಿ ಮುಖ್ಯಮಂತ್ರಿ ಭೂಪೇಶ್ ಬಫೇಲ್ ಅವರು ಈ ಯೋಜನೆಗೆ ಚಾಲನೆ ನೀಡುವರು.* ಸರ್ಕಾರ ಪ್ರತಿ ಲೀಟರ್‌ಗೆ ಕನಿಷ್ಟ ರೂ. 4 ದರದಲ್ಲಿ ಗೋ ಮೂತ್ರ ಸಂಗ್ರಹಿಸುತ್ತದೆ. * ಖರೀದಿಸಿದ ಮೂತ್ರವನ್ನು ಕೀಟ ನಿಯಂತ್ರಣ ಉತ್ಪನ್ನ ಮತ್ತು ಜೀವಾಮೃತ ( ದ್ರವ ಸಾವಯವ ಗೊಬ್ಬರ ) ತಯಾರಿಸಲು ಬಳಸಲಾಗುತ್ತದೆ. * ದುಬಾರಿ ರಾಸಾಯನಿಕ ಕೀಟನಾಶಕಗಳ ಬಳಕೆ ಕಡಿಮೆ ಮಾಡಲು ಮತ್ತು ರೈತರಿಗೆ ಅತ್ಯಲ್ಪ ಬೆಲೆಯಲ್ಲಿ ಕೀಟನಾಶಕ ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ರಾಜ್ಯದಲ್ಲಿ ಸಾವಯವ ಕೃಷಿ ಉತ್ತೇಜಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.