Job Description: * ಒಂದು ರೂಪಾಯಿ ಪಡೆದು ಜನರಿಗೆ ವೈದ್ಯಕೀಯ ಸೇವೆ ನೀಡುತ್ತಿದ್ದ ಖ್ಯಾತ ವೈದ್ಯ ಸುಶೋವನ್ ಬಂಡೋಪಾಧ್ಯಾಯ (84) ಅವರು ಇತ್ತೀಚಿಗೆ ನಿಧನರಾಗಿದ್ದಾರೆ. * ಕಳೆದ ಎರಡು ವರ್ಷಗಳಿಂದ ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕೋಲ್ಕತ್ತಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾದರು.* ‘ಏಕ್ ತಕಾರ್ ದಕ್ತಾರ್’ ಎಂದು ಪ್ರೀತಿಯಿಂದ ಕರೆಯಲ್ಪಡುವ ಸುಶೋವನ್, ಬಿರ್ಭುಮ್‌ನ ಬೋಲ್ಪುರದಲ್ಲಿ ರೋಗಿಗಳಿಗೆ ಕೇವಲ 1 ರೂಪಾಯಿಗೆ ಚಿಕಿತ್ಸೆ ನೀಡುತ್ತಿದ್ದರು. * ಸುಶೋವನ್ ಒಮ್ಮೆ ಬೋಲ್ಪುರದಿಂದ ಕಾಂಗ್ರೆಸ್‌ ಶಾಸಕರಾಗಿ ಆಯ್ಕೆಯಾದರು. * ಇನ್ನು ತೃಣಮೂಲ ಕಾಂಗ್ರೆಸ್ ರಚನೆಯಾದ ನಂತರ, ಅವರು ಬಿರ್ಭೂಮ್‌ನಲ್ಲಿ ತೃಣಮೂಲದ ಮೊದಲ ಜಿಲ್ಲಾ ಅಧ್ಯಕ್ಷರಾಗಿದ್ದರು.* ಡಾ. ಸುಶೋವನ್ ಅವ್ರಿಗೆ 2020 ರಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನು ನೀಡಿ ಗೌರವಿಸಲಾಯಿತು ಮತ್ತು ಅದೇ ವರ್ಷದಲ್ಲಿ, ಗರಿಷ್ಠ ಸಂಖ್ಯೆಯ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಕ್ಕಾಗಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ನಲ್ಲಿ ಅವರ ಹೆಸರು ದಾಖಲಾಯಿತು.