Job Description: * ಅಮೆರಿಕ ಯೂಜೀನ್‌ನಲ್ಲಿ ನಡೆಯುತ್ತಿರುವ 2022 ರ ಸಾಲಿನ ಅಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಷಿಪ್‌ ಕ್ರೀಡಾಕೂಟದ ಜಾವೆಲಿನ್‌ ಎಸೆತದಲ್ಲಿ ನೀರಜ್‌ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದಾರೆ. * ಚಾಂಪಿಯನ್‌ಷಿಪ್‌ನಲ್ಲಿ ಮೊತ್ತ ಮೊದಲ ಬಾರಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದ ನೀರಜ್‌ ಚೋಪ್ರಾ, ತಮ್ಮ ಶ್ರೇಷ್ಠ ಪ್ರದರ್ಶನ ಹೊರತಂದು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.* ನೀರಜ್‌ ಚೋಪ್ರಾ, ಇದೀಗ ಅಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಷಿಪ್‌ ಕ್ರೀಡಾಕೂಟದಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಅಥ್ಲೀಟ್‌ ಎಂಬ ದಾಖಲೆ ಬರೆದಿದ್ದಾರೆ.* ಇತ್ತೀಚೆಗೆ ನಡೆದ ಪುರುಷರ ಜಾವೆಲಿನ್‌ ಥ್ರೋ ಸ್ಪರ್ಧೆಯ ಫೈನಲ್‌ನಲ್ಲಿ ತಮ್ಮ ಶ್ರೇಷ್ಠ ಪ್ರದರ್ಶನವಾಗಿ 88.12 ಮೀ. ದೂರಕ್ಕೆ ಭರ್ಜಿಯನ್ನು ಎಸೆದ ನೀರಜ್‌. * ಗ್ರೆನೆಡಾದ ಆಂಡರ್ಸನ್‌ ಪೀಟರ್ಸನ್‌ 90.54 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಚಿನ್ನ ಗೆದ್ದುಕೊಂಡರು.* ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಯಾಕುಬ್‌ ವಾಡ್ಲಿಚ್‌ 88.09 ಮೀ. ದೂರದ ಎಸೆತದ ಮೂಲಕ ಕಂಚಿನ ಪದಕ ತಮ್ಮದಾಗಿಸಿಕೊಂಡರು.* ಇದಕ್ಕೂ ಮುನ್ನ 2003 ರಲ್ಲಿ ಅಂಜು ಬಾಭಿ ಜಾರ್ಜ್‌, ಕಂಚಿನ ಪದಕ ಗೆದ್ದ ಸಾಧನೆ ಮೆರೆದಿದ್ದರು. ಹೀಗಾಗಿ, ನೀರಜ್‌ ಅಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಎನಿಸಿಕೊಂಡಿದ್ದಾರೆ.