Job Description: * ರಾಷ್ಟೀಯ ಧ್ವಜವನ್ನು ಹಗಲು ರಾತ್ರಿ ಹಾರಲು ಮತ್ತು ಪಾಲಿಯೆಸ್ಟರ್‌ನ ಜೊತೆಗೆ ಯಂತ್ರದಿಂದ ತಯಾರಿಸುವ ಧ್ವಜಗಳನ್ನು ಬಳಸಲು ಅವಕಾಶ ನೀಡುವ ಮೂಲಕ ಸರ್ಕಾರವು ದೇಶದ ಧ್ವಜ ಸಂಹಿತೆಯನ್ನು ಬದಲಾಯಿಸಿದೆ.* 'ಆಜಾದಿ ಕಾ ಅಮೃತ್ ಮಹೋತ್ಸವ’ದ ಅಂಗವಾಗಿ ಸರ್ಕಾರವು ಆಗಸ್ಟ್ 13 ರಿಂದ 15 ರವರೆಗೆ ‘ಹರ್ ಘರ್ ತಿರಂಗ’ ಪ್ರಾರಂಭಿಸಲಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.* ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು, ಭಾರತದ ಧ್ವಜ ಸಂಹಿತೆ, 2002 ಅನ್ನು ಜುಲೈ 20, 2022 ರ ಆದೇಶದ ಮೂಲಕ ಮತ್ತಷ್ಟು ತಿದ್ದುಪಡಿ ಮಾಡಲಾಗಿದೆ.* ತೆರೆದ ಸ್ಥಳದಲ್ಲಿ ಪ್ರದರ್ಶಿಸುವ ಅಥವಾ ಸಾರ್ವಜನಿಕವಾಗಿ ಮನೆಯ ಮೇಲೆ ಪ್ರದರ್ಶಿಸುವುದನ್ನು ಹಗಲು ಹಾಗೂ ರಾತ್ರಿ ಹಾರಿಸಬಹುದು* ಸ್ವತಂತ್ರ ಭಾರತದ 75 ವರ್ಷಗಳ ನೆನಪಿಗಾಗಿ ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಆಗಸ್ಟ್ 13 ರಿಂದ 15 ರವರೆಗೆ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಂತೆ ನಾಗರಿಕರನ್ನು ಉತ್ತೇಜಿಸಲು ‘ಹರ್ ಘರ್ ತಿರಂಗ’ ಅಭಿಯಾನವನ್ನು ಪ್ರಾರಂಭಿಸಲಾಗಿದೆ.