Job Description: * ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಅಧ್ಯಕ್ಷ ಸ್ಥಾನ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಎ) ಸದಸ್ಯತ್ವಕ್ಕೆ ಹಿರಿಯ ಕ್ರೀಡಾ ಆಡಳಿತಗಾರ ನರೀಂದರ್ ಬಾತ್ರಾ ಅವರು ರಾಜೀನಾಮೆಯನ್ನು ನೀಡಿದ್ದಾರೆ.* ಭಾರತ ಒಲಿಪಿಂಕ್ ಸಂಸ್ಥೆ(ಐಒಎ) ಅಧ್ಯಕ್ಷ ಸ್ಥಾನದಿಂದಲೂ ಅಧಿಕೃತವಾಗಿ ಕೆಳಗಿಳಿದಿದ್ದಾರೆ ಹಾಗು ದೆಹಲಿ ಹೈಕೋರ್ಟ್ ಐಒಎ ಅಧ್ಯಕ್ಷರಾಗಿ ಯಾವುದೇ ಕೆಲಸ ನಿರ್ವಹಿಸಬಾರದು ಎಂದು ಸೂಚಿಸಿತ್ತು.* ನರೀಂದರ್ ಬಾತ್ರಾ ಅವರು ಐಎಒ , ಐಒ ಮತ್ತು ಎಫ್‌ಐಎಚ್‌ಗೆ ಪ್ರತ್ಯೇಕವಾಗಿ ರಾಜೀನಾಮೆ ಪತ್ರ ಬರೆದು ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ ಹಾಗು ಅವರು ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ನೀಡುತ್ತಿದ್ದೇನೆ ' ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.* ದೆಹಲಿ ಹೈಕೋರ್ಟ್ ಮೇ 25 ರಂದು ಹಾಕಿ ಇಂಡಿಯಾದಲ್ಲಿ ( ಎಚ್‌ಐ ) ಅಜೀವ ಸದಸ್ಯತ್ವ ' ಎಂಬ ಪದವಿಯನ್ನು ಕಿತ್ತುಹಾಕಿರುವುದಾಗಿ ತೀರ್ಪು ನೀಡಿತ್ತು ಹಾಗು ಬಾತ್ರಾ ಅವರು ಎಚ್‌ಐ ಆಜೀವ ಸದಸ್ಯರಾಗಿದ್ದುಕೊಂಡು 2017 ರಲ್ಲಿ ಐಒಎ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು.* ಇವರು ದೆಹಲಿ ಹೈಕೋರ್ಟ್ನ ತೀರ್ಪಿನ ಕಾರಣ ಅವರು ಐಒಎ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದರು ಆದ್ದರಿಂದ ಹಂಗಾಮಿ ಅಧ್ಯಕ್ಷರನ್ನಾಗಿ ಹಿರಿಯ ಉಪಾಧ್ಯಕ್ಷ ಅನಿಲ್ ಖನ್ನಾ ಅವರನ್ನು ಹೈಕೋರ್ಟ್ ನೇಮಕ ಮಾಡಿತ್ತು.* ಬಾತ್ರಾ ಅವರು ಈ ತೀರ್ಪಿಗೆ ತಡೆಯಾಜ್ಞೆ ಕೋರಿದ್ದರು ಆದ್ರೆ ಕೋರ್ಟ್ ಈ ಮನವಿಯನ್ನು ತಿರಸ್ಕರಿಸಿತ್ತು ಆದ್ದರಿಂದ ಬಾತ್ರಾ ರವರು ವಿವಿಧ ಹುದ್ದೆಗಳಿಗೆ ರಾಜಿನಾಮೆಯನ್ನು ನೀಡಿದರು ಎನ್ನಲಾಗಿದೆ.* 2017 ರಲ್ಲಿ ಮೊದಲ ಬಾರಿಗೆ ಬಾತ್ರಾ ರವರು ಐಒಎ ಅಧ್ಯಕ್ಷರಾಗಿ ಆಯ್ಕೆಯಾದರು.* ಡಿಸೇಂಬರ್ ನಲ್ಲಿ ಐಒಎ ಚುನಾವಣೆ ನಡೆಯಬೇಕಿತ್ತು ಆದರೆ ನಿಯಮಗಳಲ್ಲಿ ತಿದ್ದುಪಡಿ ಪ್ರಕ್ರಿಯೆ ಇದಿದ್ದರಿಂದ ನಿಗದಿತ ವೇಳಾ ಪಟ್ಟಿಯಂತೆ ಚುನಾವಣೆ ನಡೆದಿಲ್ಲ.* ಐಒಎ ಉಪಾಧ್ಯಕ್ಷ ಸುಧಾಂಶು ಮಿತ್ತಲ್ ರವರು ಬಾತ್ರಾ ಅವರ ಮೇಲೆ ಹಣ ದುರುಪಯೋಗ ಆರೋಪ ಹೊರಿಸಿ 2020 ರಲ್ಲಿ ಐಒಸಿಗೆ ಪತ್ರ ಬರೆದಿದ್ದರು.