Job Description: * ಏಕದಿನ ಕ್ರಿಕೆಟ್‌ಗೆ ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ರವರು ನಿವೃತ್ತಿಯನ್ನು ಘೋಷಿಸಿದ್ದಾರೆ ಇವರು ಅತ್ಯುತ್ತಮ ಫಾರ್ಮ್‌ನಲ್ಲಿ ಇರುವ ಸಮಯದಲ್ಲಿ ನಿವೃತ್ತಿ ನಿರ್ಧಾರ ಕೈಗೊಂಡಿರುವುದು ಅಚ್ಚರಿ ಉಂಟುಮಾಡಿದೆ.* ಬೆನ್ ಸ್ಟೋಕ್ಸ್ ರವರು ತಮ್ಮ ಕೊನೆಯ ಏಕದಿನ ಪಂದ್ಯವನ್ನು ಡರ್ ಹ್ಯಾಮ್ ನಲ್ಲಿ ದಕ್ಷಿಣ ಆಫ್ರಿಕಾ ಎದುರು ಆಡಲಿದ್ದಾರೆ.* ಇಸಿಬಿ ಹೇಳಿಕೆಯಲ್ಲಿ ಏಕದಿನ ಮಾದರಿಯಿಂದ ನಿವೃತ್ತಿ ಆಗಲು ನಿರ್ಧರಿಸಿದ್ದೇನೆ ' ಎಂದು ಸ್ಟೋಕ್ಸ್ ಹೇಳಿದ್ದಾರೆ ಹಾಗು ಇವರು ಕ್ರಿಕೆಟ್‌ನಲ್ಲಿ ಎಲ್ಲಾ ಮೂರು ಮಾದರಿಗಳಲ್ಲಿ ಆಡಲು ನನಗೆ ಕಷ್ಟ ವಾಗುತ್ತಿದೆ ಮತ್ತು ವೇಳಾಪಟ್ಟಿಗೆ ಹೊಂದಿಕೊಳ್ಳಲು ದೇಹಕ್ಕೆ ಸಾಧ್ಯವಾ ಗುತ್ತಿಲ್ಲ ಎಂದು ಹೇಳಿದರು ಮತ್ತು ಟೆಸ್ಟ್ ಮತ್ತು ಟಿ -20 ಅತ್ತ ಗಮನ ಹರಿಸಲು ಏಕದಿನ ಕ್ರಿಕೆಟ್‌ಗೆ ವಿದಾಯವನ್ನು ನೀಡಬೇಕಾಯಿತು ಎಂದರು. * ಸ್ಟೋಕ್ಸ್ ರವರು ಏಕ ದಿನ ಪಂದ್ಯವನ್ನು 2011 ರಲ್ಲಿ ಐರ್ಲೆಂಡ್ ವಿರುದ್ಧ ಡಬ್ಲಿನ್‌ನಲ್ಲಿ ನಡೆದ ಪಂದ್ಯದ ಮೂಲಕ ಪದಾರ್ಪಣೆಯನ್ನು ಮಾಡಿದ್ದರು ಹಾಗು ಮಂಗಳವಾರ ನಡೆಯಲಿರುವ ಪಂದ್ಯ ಅವರ 105 ನೇ ಪಂದ್ಯ ಆಗಿದೆ.* ಇವರು ಲಾರ್ಡ್ಸ್ ನಲ್ಲಿ ನಡೆದಿದ್ದ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಟವಾಡಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು.* ಸ್ಟೋಕ್ಸ್ ರವರು ಏಪ್ರಿಲ್ ತಿಂಗಳಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕರಾಗಿದ್ದರು ಹಾಗು ಇವರು ಟೆಸ್ಟ್ ಅಲ್ಲದೆ ಟಿ -20 ಮಾದರಿಯಲ್ಲಿ ಆಟವನ್ನು ಆಡಲಿದ್ದಾರೆ.