Job Description: * ದಕ್ಷಿಣ ಕೊರಿಯಾದ ಐಎಸ್‌ಎಸ್‌ಎಫ್‌ ವಿಶ್ವಕಪ್ ಶೂಟಿಂಗ್ ಟೂರ್ನಿಯಲ್ಲಿ ಭಾರತದ ಮೈರಾಜ್ ಅಹ್ಮದ್ ಖಾನ್ ಚಿನ್ನದ ಪದಕವನ್ನು ಪಡೆದುಕೊಂಡರು ಹಾಗು ಸೋಮವಾರ ನಡೆದ ಪುರುಷರ ಸ್ಕೀಟ್ ವಿಭಾಗದಲ್ಲಿ ಇವರು ಅಗ್ರಸ್ಥಾನ ಗಳಿಸಿರುವ ಮೊದಲ ಭಾರತದ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.* ಈ ಟೋರ್ನಿಯಲ್ಲಿ 46 ವರ್ಷದ ಮೈರಾಜ್ ರವರು 40 ಶಾಟ್‌ಗಳ ಫೈನಲ್‌ನಲ್ಲಿ 37 ಪಾಯಿಂಟ್ಸ್ ಗಳನ್ನೂ ತೆಗೆದುಕೊಂಡರು ಹಾಗು ದಕ್ಷಿಣ ಕೊರಿಯಾದ ಮಿನ್ಸು ಕಿಮ್ ರವರು 36 ಪಾಯಿಂಟ್ ಗಳನ್ನು ಮತ್ತು ಬ್ರಿಟನ್‌ನ ಬೆನ್ ಲೆವೆಲ್ಲಿನ್ 26 ಪಾಯಿಂಟ್ಸ್ಗಳನ್ನು ತೆಗೆದುಕೊಂಡು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದುಕೊಂಡರು.* ಮೈರಾಜ್ ಅವರು ಅರ್ಹತಾ ಸುತ್ತಿನಲ್ಲಿ 125 ರ ಪೈಕಿ ಅವರು 119 ಪಾಯಿಂಟ್ಸ್ ಗಳನ್ನು ತೆಗೆದುಕೊಂಡರು ಹಾಗು ಭಾರತದ ವಿಜಯ್‌ವೀರ್ ಸಿಧು ರವರು ಈ ವಿಭಾಗದಲ್ಲಿ ಸ್ಪರ್ದಿಸಿ ರ್ಯಂಕಿಂಗ್ ಸುತ್ತಿಗೆ ಅವಕಾಶ ಪಡೆದರು ಪದಕದ ಸುತ್ತಿಗೆ ಅರ್ಹತೆ ಗಳಿಸಲು ಸೋತರು.* ಪುರುಷರ 25 ಮೀ , ರಾಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಕಣಕ್ಕಳಿದಿದ್ದ ಅನೀಶ್ ರವರು 12 ನೇ ಸ್ಥಾನವನ್ನು ಮತ್ತು ಸಮೀರ್ ರವರು 30 ನೇ ಸ್ಥಾನವನ್ನು ಗಲಸಿದರು ಹಾಗು ಮುಫ್ ದ್ದಾಲ್ ದೀಸ್ವಾಲ ರವರು ಮಹಿಳೆಯರ ಸ್ಕೀಟ್ ನಲ್ಲಿ 23 ನೇ ಸ್ಥಾನವನ್ನು ಗಳಿಸಿದರು. * ಭಾರತ ತಂಡದ ಅತ್ಯಂತ ಹಿರಿಯ ಶೂಟರ್ ಆಗಿರುವ ಮೈರಾಜ್ ರವರು ಎರಡು ಬಾರಿಯ ಒಲಿಂಪಿಯನ್ ಚಾಂಗ್ವಾನ್ ಗೆ ತೆರಳಿರುವ ಶೂಟರ್ ಆಗಿದ್ದಾರೆ ಅದಲ್ಲದೆ 2016 ರ ರಿಯೊ ಡಿ ಜನೈರೊ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.* ಭಾರತ ಮಹಿಳಾ ತಂಡವು 50 ಮೀಟರ್ಸ್ ರೈಫಲ್ ತ್ರಿ ಪೋಸಿಷನ್ಸ್‌ನಲ್ಲಿ ಅಂಜುಮ್ ಮೌದ್ಗೀಲ್,ಆಶಿ ಚೌಕ್ಯಿ ಮತ್ತು ಸಿಫ್ತ್ ಕೌರ್ ಸಮ್ರ ಅವರಿದ್ದ ತಂಡವು ಕಂಚಿನ ಪದಕವನ್ನು ಗೆದ್ದರು.* ಈ ಸುತ್ತಿನಲ್ಲಿ ಭಾರತ ತಂಡವು ಕಂಚಿನ ಪದಕದ ಶೂಟರ್ ಸುತ್ತಿನಲ್ಲಿ ಆಸ್ಟ್ರಿಯಾದ ಶೆಲಿನ್ ವೈಬೆಲ್,ನದಿನ್ ಉಂಗರಂಕ್ ಮತ್ತು ರೆಬೆಕ್ಕಾ ಕೊಯೆಕ್ ಅವರನ್ನು 16 -6 ಇಂದ ಪರಾಭವಗೊಳಿಸಿದ್ದಾರೆ.* ಸೋಮವಾರ ಚಿನ್ನ ಮತ್ತು ಕಂಚಿನ ಪದಕವನ್ನು ಭಾರತ ತಂಡವು ಗೆದ್ದು ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ ಈಗ ಭಾರತ ತಂಡದ ಬಳಿ ಒಟ್ಟು 13 ಪದಕಗಳಿವೆ 5 ಚಿನ್ನ ,ಬೆಳ್ಳಿ ಮತ್ತು 3 ಕಂಚುನ್ನು ಗೆದ್ದುಕೊಂಡಿದೆ.