Job Description: * ಲೋಕಸಭಾ ಸಚಿವಾಲಯದಿಂದ ಹೊಸ ಕೈಪಿಡಿ ಬಿಡುಗಡೆ ಮಾಡಲಾಗಿದ್ದು, ನಾಚಿಕೆಗೇಡು, ದುರ್ಬಳಕೆ, ಭ್ರಷ್ಟ ನಾಟಕ ಸೇರಿದಂತೆ ಹಲವು ಪದಗಳನ್ನು ಬಳಸುವಂತಿಲ್ಲ ಎಂದು ಆದೇಶ ಹೊರಡಿಲಾಗಿದೆ.* ಅಸಂಸದೀಯ ಪದಗಳು ಎಂದು ಪರಿಗಣಿಸಿರುವ ಜುಮ್ಲಾಜೀವಿ, ಬಾಲ ಬುದ್ಧಿ, ಕೋವಿಡ್‌ ಹರಡುವವ, ಸ್ನೂಪ್‌ಗೇಟ್‌, ನಾಚಿಕೆಗೇಡು, ದುರ್ಬಳಕೆ, ಮೋಸಹೋದೆವು, ಭ್ರಷ್ಟ, ನಾಟಕ, ಆಷಾಢಭೂತಿತನ, ಅಸಮರ್ಥ, ಅರಾಜಕ, ಶಕುನಿ, ಸರ್ವಾಧಿಕಾರಿತನ, ತಾನಾಶಾಹಿ, ವಿನಾಶಪುರುಷ, ಖಲಿಸ್ತಾನಿ, ನಿಕಮ್ಮಾ, ನೌಟಂಕಿ, ರಕ್ತಪಾತ, ಬ್ಲಡಿ, ಚಮಚಾ, ಚಮಚಾಗಿರಿ, ಚೇಲಾ, ಬಾಲಿಶತನ, ಹೇಡಿ, ಕ್ರಿಮಿನಲ್‌, ಮೊಸಳೆ ಕಣ್ಣೀರು, ಕಳಂಕ, ಕತ್ತೆ, ಕಣ್ಣೊರೆಸುವುದು, ದಾಂಧಲೆ, ಸುಳ್ಳು ಮುಂತಾದ ಪದಗಳನ್ನು ಜು.18 ರಿಂದ ಆರಂಭವಾಗಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಸಂಸದರು ಬಳಸುವಂತಿಲ್ಲ.* ಅರಾಜಕತನ, ಶಕುನಿ, ಸರ್ವಾಧಿಕಾರಿತನ, ತಾನಾಶಾಹಿ, ವಿನಾಶ ಪುರುಷ, ಖಲಿಸ್ತಾನಿ, ಖೂನ್‌ ಸೆ ಖೇತಿ, ನೌಟಂಕಿ, ನಿಕಮ್ಮಾ ಮುಂತಾದ ಪದಗಳನ್ನೂ ಈ ಪಟ್ಟಿಗೆ ಸೇರಿಸಲಾಗಿದೆ* ಕಾಂಗ್ರೆಸ್‌, ಟಿಎಂಸಿ, ಶಿವಸೇನೆ ಮುಂತಾದ ಪಕ್ಷಗಳು ಲೋಕಸಭೆ ಸಚಿವಾಲಯದ ಈ ಕೈಪಿಡಿಗೆ ಆಕ್ರೋಶ ವ್ಯಕ್ತಪಡಿಸಿವೆ, ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಲು ಆಗಾಗ ಬಳಸುವ ಪದಗಳನ್ನೇ ಅಸಂಸದೀಯವೆಂದು ಆದೇಶ ಹೊರಡಿಸಲಾಗಿದೆ ಎಂದು ಕಿಡಿಕಾರಿವೆ.* ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು, ‘ಇದು ನವ ಭಾರತಕ್ಕೆ ಹೊಸ ಡಿಕ್ಷನರಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.* ‘ಇದು ಹೊಸ ಆದೇಶವೇನೂ ಅಲ್ಲ. ಹಿಂದೆ ಯುಪಿಎ ಸರ್ಕಾರವಿದ್ದಾಗಲೂ ಇವುಗಳಲ್ಲಿ ಹೆಚ್ಚಿನ ಪದಗಳನ್ನು ಅಸಂಸದೀಯವೆಂದೇ ಪರಿಗಣಿಸಲಾಗುತ್ತಿತ್ತು. ಈ ಕೈಪಿಡಿಯು ಅಂತಹ ಪದಗಳ ಒಂದು ಪಟ್ಟಿಯಷ್ಟೆ. ಇದು ಆದೇಶವಾಗಲೀ, ಸೂಚನೆಯಾಗಲೀ ಅಲ್ಲ’ ಎಂದು ಸ್ಪಷ್ಟನೆ ನೀಡಿವೆ.* ವಿವಿಧ ಕಾಮನ್ವೆಲ್ತ್‌ ದೇಶಗಳ ಸಂಸತ್ತಿನಲ್ಲೂ ಇಂತಹ ರೂಢಿಯಿದೆ. ಆದರೆ, ಇಂತಹ ಪದಗಳನ್ನು ಸಂಸದರು ಬಳಸಿದರೆ ಲೋಕಸಭೆ ಮತ್ತು ರಾಜ್ಯಸಭೆಯ ಮುಖ್ಯಸ್ಥರಿಗೆ ಅವುಗಳನ್ನು ಕಡತದಿಂದ ತೆಗೆದುಹಾಕುವ ಅಥವಾ ಉಳಿಸಿಕೊಳ್ಳುವ ಅಂತಿಮ ಅಧಿಕಾರವಿರುತ್ತದೆ.* ಸಂಸದರ ಮಾತನಾಡುವಾಗ ಅವರ ಧಾಟಿಯನ್ನು ಗಮನಿಸಿ ಇಲ್ಲಿರುವ ಕೆಲ ಪದಗಳನ್ನು ಅಸಂಸದೀಯ ಅಲ್ಲವೆಂದು ಪರಿಗಣಿಸಲೂ ಅವಕಾಶವಿದೆ ಎಂದು ಕೈಪಿಡಿಯಲ್ಲಿ ಹೇಳಲಾಗಿದೆ.* ಸಂಸದರು ಬಳಸುವ ಪದಗಳ ಬಗ್ಗೆ ಕ್ರಮ ಕೈಗೊಳ್ಳುವ ಅಂತಿಮ ಅಧಿಕಾರ ಶಾಸನ ಸಭೆಯ ಮುಖ್ಯಸ್ಥರಿಗಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.