Job Description: * ನೀರಜ್ ಚೋಪ್ರಾ ಅವರು ಅಮೇರಿಕಾದ ಯೂಜೀನ್ ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್ ನಲ್ಲಿ ಭಾರತದ ಪರ ಆಡಲಿದ್ದಾರೆ ಇದರಿಂದ ಶತ ಕೋಟಿಗೂ ಅಧಿಕ ಜನರ ನಿರೀಕ್ಷೆಯ ಭಾರವನ್ನು ಇವರು ಹೊತ್ತುಕೊಂಡಿದ್ದಾರೆ.* ಚೋಪ್ರಾ ರವರು ಟೋಕಿಯೋ ಒಲಂಪಿಕ್ಸ್ ನಲ್ಲಿ ಚಿನ್ನವನ್ನು ಜಯಿಸಿದ್ದಾರೆ ಭಾರತಕ್ಕೆ ಈ ಚಾಂಪಿಯನ್‌ಷಿಪ್ ನಲ್ಲಿ ಪದಕ ತಂದುಕೊಡುವುದು ಬಹುತೇಕ ಖಚಿತವಾಗಿದೆ ಏಕೆಂದರೆ ಈ ವರ್ಷದಲ್ಲಿ ಅವರು ತಮ್ಮ ಪ್ರದರ್ಶನದಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡಿದ್ದಾರೆ ಇವರು ಎಲ್ಲ ಕೂಟದಲ್ಲೂ 90 ಮೀ ಸನಿಹದ ಪ್ರದರ್ಶನವನ್ನು ತೋರಿಸಿದ್ದಾರೆ.* ನೀರಜ್ ಚೋಪ್ರಾ ಅವರು ಜೂನ್ ತಿಂಗಳಲ್ಲಿ ನಡೆದ ಫಿನ್ಲೆಂಡ್ ನಲ್ಲಿ ನಡೆದ ಪಾವೊ ನೊರ್ಮಿ ಕೂಟದಲ್ಲಿ ತಮ್ಮ ವೈಯಕ್ತಿಕ ಪ್ರದರ್ಶನ ನೀಡುವದರ ಜೊತೆಗೆ 89. 30 ಮೀ ಸಾಧನೆಯನ್ನು ಮಾಡಿದ್ದರು.* ಇವರು ಸ್ಟಾಕ್‌ಹೋಮ್ ಡೈಮಂಡ್ ಲೀಗ್‌ನಲ್ಲಿ 89.94 ಮೀ ಸಾಧನೆ ಮೂಲಕ ತಮ್ಮ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ.* ಈ ಚಾಂಪಿಯನ್‌ಷಿಪ್ ನಲ್ಲಿ ಚೋಪ್ರಾ ರವರಿಗೆ ಗ್ರೆನಾಡದ ಅಂಡರ್ಸನ್ ಪೀಟರ್ಸ್‌ ಅವರು ಪೈಪೋಟಿ ನೀಡಲಿದ್ದಾರೆ ಹಾಗು ಹಾಲಿ ಚಾಂಪಿಯನ್‌ ಕೂಡಾ ಆಗಿರುವ ಪೀಟರ್ಸ್ ಈ ಋತುವಿನಲ್ಲಿ 93.07 ಮೀ ಸಾಧನೆಯನ್ನು ಮಾಡಿದ್ದರು.* ಭಾರತದ ಪರ ಚೋಪ್ರಾ ಅವರನ್ನು ಹೊರತು ಪಡಿಸಿ ಲಾಂಗ್‌ಜಂಪ್ ಸ್ಪರ್ಧಿ ಮುರಳಿ ಶ್ರೀಶಂಕರ ಭಾರತದ ಪರ ಅಲ್ಪ ಭರವಸೆಯನ್ನು ಮೂಡಿಸಿದ್ದಾರೆ ಇವರು ಏಪ್ರಿಲ್‌ನಲ್ಲಿ ನಡೆದಿದ್ದ ಫೆಡರೇಷನ್ ಕಪ್‌ನಲ್ಲಿ ಇವರು 8 .36 ಮೀ ಸಾಧನೆಯನ್ನು ಮಾಡಿದ್ದರು.* ಶ್ರೀಶಂಕರ್ ಅವರು ಈ ಋತುವಿನಲ್ಲಿ ವಿವಿಧ ದೇಶಗಳ ಸ್ಪರ್ಧಿಗಳ ಸಾಧನೆಗೆ ಹೋಲಿಸಿದರೆ ಇವರು ಎರಡನೇ ಸ್ಥಾನದಲ್ಲಿದ್ದಾರೆ.* ಭಾರತದ 23 ಸ್ಪರ್ಧಿಗಳು ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್ ನಲ್ಲಿ ವಿವಿಧ ವಿಭಾಗಗಳಲ್ಲಿ ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.