Job Description: * ದಕ್ಷಿಣ ಕೊರಿಯದಲ್ಲಿ ನಡೆಯುತ್ತಿರುವ ಐಎಎಸ್ಎಸ್ಎಫ್ ವಿಶ್ವಕಪ್ ಶೂಟಿಂಗ್‌ನಲ್ಲಿ ಭಾರತದ ಶೂಟರ್‌ಗಳು ಮತ್ತೊಂದು ಚಿನ್ನ ಹಾಗೂ ಮೂರು ಬೆಳ್ಳಿಯ ಪದಕವನ್ನು ಭಾರತಕ್ಕೆ ಕೊಟ್ಟಿದ್ದಾರೆ.* ಪುರುಷರ 10 ಮೀ ಏರ್ ರೈಫಲ್ ನ ವಿಭಾಗದಲ್ಲಿ ಅರ್ಜುನ ಬಬೂತಾ,ತುಷಾರ ಮಾನೆ ಮತ್ತು ಪಾರ್ಥ ಮಖಿಜಾ ಅವರು ಅಗ್ರಸ್ಥಾನವನ್ನು ಗಳಿಸಿದರು.* ಭಾರತವು ಚಿನ್ನದ ಪದಕಕ್ಕಾಗಿ ನಡೆದ ಪೈಪೋಟಿಯಲ್ಲಿ 17-15 ರಲ್ಲಿ ಕೊರಿಯಾ ತಂಡವನ್ನು ಸೋಲಿಸಿತು ಹಾಗು ಕೊರಿಯಾದ ಸ್ಪರ್ಧಿಗಳಾದ ಸೆಯುಂಗೊ ಬಾಂಗ್, ಸೆಂಗ್ಡೊ ಕಿಮ್, ಮತ್ತು ಹಾಜುನ್ ಪಾರ್ಕ್ ರವರು ಭಾರತಕ್ಕೆ ಪ್ರಬಲ ಪೈಪೋಟಿ ಒಡ್ಡಿದರೂ ಭಾರತದ ಸ್ಪರ್ಧಿಗಳು ಚಿನ್ನವನ್ನು ಗೆದ್ದರು.* ಚಾಂಪಿಯನ್‌ಷಿಪ್‌ನಲ್ಲಿ ಅರ್ಜುನ ಮತ್ತು ತುಷಾರ್ ಅವರಿಗೆ ದೊರತ ಎರಡನೇ ಚಿನ್ನದ ಪದಕ ಇದಾಗಿದೆ ಮತ್ತು ವೈಯಕ್ತಿಕ ವಿಭಾಗದಲ್ಲೂ ಅರ್ಜುನ ಅಗ್ರ ಸ್ಥಾನವನ್ನು ಪಡೆದಿದ್ದಾರೆ.* ಮಹಿಳೆಯರ ವಿಭಾಗದಲ್ಲಿ 10 ಮೀ ಏರ್ ರೈಫಲ್ ನ ಭಾರತಕ್ಕೆ ಬೆಳ್ಳಿ ಲಭಿಸಿತು ಮತ್ತು ಭಾರತ ತಂಡವು ಇಳವೆನಿಲ್ ವಲರಿವನ್, ಮೆಹುಲಿ ಘೋಷ್ ಮತ್ತು ರಮಿತಾ ರವರನ್ನು ಒಳಗೊಂಡಿತ್ತು ಈ ತಂಡವು 10-16 ರಲ್ಲಿ ಎದುರಾಳಿ ದೇಶದ ಜಿಯೊನ್ ಕುಮ್,ಯುನ್‌ಸಿಯೊ ಲೀ ಮತ್ತು ದಾಯೆಯೊಂಗ್ ಗೊನ್ ಎದುರು ಸೋತರು.* ಭಾರತದ ಪುರುಷರ ಮಹಿಳೆಯರ ತಂಡಗಳು 10 ಮೀ . ಏರ್ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿಯ ಪದಕವನ್ನು ಗೆದ್ದುಕೊಂಡವು.* ಪುರುಷರ ತಂಡವು ಚಿನ್ನದ ಪದಕಕ್ಕಾಗಿ ನಡೆದ ಪೈಪೋಟಿಯಲ್ಲಿ 15-17 ರಲ್ಲಿ ಇಟಲಿ ಎದುರು ಸೋತಿತು ಹಾಗು ಭಾರತದ ಮಹಿಳಾ ತಂಡವು ರಿಧಿಮಾ ಸಂಗ್ಟಾನ್ ಮತ್ತು ಯುವಿಕಾ ತೋಮರ್ ಮತ್ತು ಪಲಕ್ ರವರು ತಂಡದಲ್ಲಿದ್ದರು ಇವರು 2-10 ರಲ್ಲಿ ಕೊರಿಯಾ ಎದುರು ಸೋತರು.* ಭಾರತವು ಮೂರು ಚಿನ್ನ , ನಾಲ್ಕು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಜಯಗಳಿಸಿದೆ ಇದರಿಂದ ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ ಮುಂದಿನ ಸ್ಥಾನದಲ್ಲಿ ದಕ್ಷಿಣ ಕೊರಿಯಾ ಮತ್ತು ಸರ್ಬಿಯಾ ದೇಶಗಳಿವೆ.