Job Description: * ಉನ್ನತ ಮೂಲಗಳ ಪ್ರಕಾರ ಗುರುವಾರ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ್ ಅವರು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.* ಇವರು ಮಾಲ್ಡಿವ್ಸ್ ನಿಂದ ಸಿಂಗಪುರಕ್ಕೆ ತೆರಳಿದ್ದರು ಅವರು ಅಲ್ಲಿಂದಲೇ ರಾಜೀನಾಮೆ ಪತ್ರವನ್ನು ಶ್ರೀಲಂಕಾ ಸಂಸತ್ತಿನ ಸ್ಪೀಕರ್ ಅವರಿಗೆ ಇ - ಮೇಲ್ ಮೂಲಕ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.* ಕೆಲವೊಂದು ವಿಷಯಗಳನ್ನು ಖಚಿತ ಪಡಿಸಲು ಸಾಧ್ಯವಾಗುತ್ತಿಲ್ಲ ಏಕೆಂದರೆ ಸಿಂಗಪುರಕ್ಕೆ ಬಂದಿಳಿದ ತಕ್ಷಣ ಅವರು ರಾಜೀನಾಮೆ ಪತ್ರ ರವಾನಿಸಿದ್ದಾರೆಯೇ ಮತ್ತು ಇ-ಮೇಲ್ ಸ್ವರೂಪದ ರಾಜೀನಾಮೆ ಅಂಗೀಕಾರವಾಗುತ್ತದೆಯೇ ಎಂಬ ಅಂಶಗಳು ಇನ್ನೂ ಖಚಿತಪಟ್ಟಿಲ್ಲ.* ಮಾಲ್ಡಿವ್ಸ್ ಗೆ ಹೆಂಡತಿಯ ಜೊತೆಗೆ ಪಲಾಯನ ಮಾಡಿದ್ದ ಗೊಟಬಯ ಅವರು ಸೌದಿ ಅರೇಬಿಯನ್ ಏರ್ ಲೈನ್ಸ್ ಮೂಲಕ ಸಂಜೆ ವೇಳೆಗೆ ಸಿಂಗಪುರಕ್ಕೆ ತೆರಳಿದ್ದಾರೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.* ಪತ್ನಿ ಹಾಗೂ ಇಬ್ಬರು ಭದ್ರತಾ ಸಿಬ್ಬಂದಿಯೊಂದಿಗೆ 73 ವರ್ಷದ ಗೊಟಬಯ ರಾಜಪಕ್ಸ ಮಿಲಿಟರಿ ಜೆಟ್‌ನಲ್ಲಿ ಮಾಲ್ಡಿವ್ಸ್‌ಗೆ ಪ್ರಯಾಣ ಮಾಡಿದ್ದರು. ದೇಶದ ಆರ್ಥಿಕ ಸ್ಥಿತಿಯನ್ನು ತಪ್ಪಾಗಿ ನಿರ್ವಹಣೆ ಮಾಡಿದ್ದ ಕಾರಣಕ್ಕೆ ಗೊಟಬಯ ರಾಜಪಕ್ಸ ವಿರುದ್ಧ ಶ್ರೀಲಂಕಾದ ಜನರು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು.* ಮುಂಬರುವ ಸರ್ಕಾರದಿಂದ ಬಂಧನವಾಗುವ ಸಾಧ್ಯತೆಯನ್ನು ಅರಿತ ಗೊಟಬಯ ರಾಜಪಕ್ಸ ಸಿಂಗಾಪುರಕ್ಕೆ ಪಲಾಯನ ಮಾಡುವವರೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ.* ಗೊಟಬಯ ರಾಜಪಕ್ಸ ಇವರಿಂದಾಗಿ 22 ಮಿಲಿಯನ್‌ ಜನಸಂಖ್ಯೆ ಹೊಂದಿರುವ ಶ್ರೀಲಂಕಾ ದೇಶವು ಅತ್ಯಂತ ಕೆಟ್ಟ ಆರ್ಥಿಕ ಸ್ಥಿತಿಯನ್ನು ಎದುರಿಸುತ್ತಿದ್ದು, ಏಳು ದಶಕಗಳಲ್ಲಿಯೇ ಜನರು ಅತ್ಯಂತ ಹೀನಾಯ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಲಕ್ಷಾಂತರ ಜನರು ಆಹಾರ, ಔಷಧ, ಇಂಧನ ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸಲು ಹೆಣಗಾಡುತ್ತಿದ್ದಾರೆ.* ರಾಜಪಕ್ಸ ತಮ್ಮ ರಾಜೀನಾಮೆಯನ್ನು ಸಂಸತ್ತಿನ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಅವರಿಗೆ ಮೇಲ್ ಮೂಲಕ ಕಳುಹಿಸಿದ್ದಾರೆ. * ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಗೊಟಬ ಅವರು ನೇಮಕ ಮಾಡಿದರು