Job Description: * ನೂತನ ಸಂಸತ್‌ ಭವನದ ಮೇಲೆ ಸ್ಥಾಪಿಸಲಾಗಿರುವ ರಾಷ್ಟ್ರ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು.* ಈ ರಾಷ್ಟ್ರ ಲಾಂಛನವು ಕಂಚಿನದಲ್ಲಿ ನಿರ್ಮಿಸಲಾಗಿರುವ ನಾಲ್ಕು ದಿಕ್ಕುಗಳನ್ನು ನೋಡುತ್ತಿರುವ ಸಿಂಹಗಳ ಮುಖಗಳಿರುವ 'ರಾಷ್ಟ್ರ ಲಾಂಛನವು ಒಟ್ಟು 9,500 ಕೆ.ಜಿ ತೂಕವಿದ್ದು, 6.5 ಮೀಟರ್‌ ಎತ್ತರವಿದೆ.* ನೂತನ ಸಂಸತ್‌ ಭವನದ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ನೌಕರರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆ ನಡೆಸಿದರು.* ಕಂಚಿನಿಂದ ಮಾಡಿರುವ ರಾಷ್ಟ್ರೀಯ ಲಾಂಭನವನ್ನು ಸಂಸತ್ ಭವನದ ಮೇಲೆ ಸ್ಥಾಪಿಸುವ ಪ್ರಕ್ರಿಯೆಯು ಎಂಟು ಬೇರೆ ಬೇರೆ ಹಂತಗಳನ್ನು ಒಳಗೊಂಡಿತ್ತು. ಮಣ್ಣಿನಲ್ಲಿ ಮೊದಲಿಗೆ ಮಾದರಿ ರೂಪಿಸಿದ್ದರಿಂದ ಹಿಡಿದು ಕಂಪ್ಯೂಟರ್‌ ಗ್ರಾಫಿಕ್ಸ್‌ ಹಾಗೂ ಕಂಚಿನಲ್ಲಿ ಅದರ ಅಚ್ಚು, ನಯಗೊಳಿಸುವ ಹಂತಗಳು ಸೇರಿವೆ.* ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಹಾಗೂ ಕೇಂದ್ರದ ಸಚಿವರು ಭಾಗಿಯಾದರು.