Job Description: * ಖುವ್ಸ್ ಗುಲ್ ಸರೋವರ ರಾಷ್ಟ್ರೀಯ ಪಾರ್ಕ್ ಅನ್ನು ಯುನೆಸ್ಕೊ ತನ್ನ ಜಾಗತಿಕ ಜೀವಗೋಳದ ಮೀಸಲು ಜಾಲಕ್ಕೆ(ವರ್ಲ್ಡ್ ನೆಟ್ ವರ್ಕ್ ಆಫ್ ಬಯೋಸ್ಪಿಯರ್ ರಿಸರ್ವ್ಸ್) ಸೇರ್ಪಡೆಯನ್ನು ಮಾಡಿದೆ.* ಈ ನಿರ್ಧಾರವನ್ನು ಮಾನವ ಮತ್ತು ಜೀವಗೋಳ ಕಾರ್ಯಕ್ರಮದ ಅಂತಾರಾಷ್ಟ್ರೀಯ ಸಮನ್ವಯ ಮಂಡಳಿಯ 34 ನೇ ಅಧಿವೇಶನದಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಈ ಅಧಿವೇಶನವು ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆದಿದೆ.* ಯುನೆಸ್ಕೊ 1970 ರ ದಶಕದ ಆರಂಭದಲ್ಲಿ ಇದನ್ನು ಆರಂಭಿಸಿತ್ತು ಈ ಕಾರ್ಯಕ್ರಮದ ಪ್ರಮುಖ ಗುರಿಯು ಜನರು ಮತ್ತು ಪರಿಸರದ ನಡುವಿನ ಬಾಂಧವ್ಯವನ್ನು ಹೆಚ್ಚಿಸಲು ಅಗತ್ಯವಾದ ವೈಜ್ಞಾನಿಕ ಆಧಾರವನ್ನು ಸ್ಥಾಪಿಸುವುದಾಗಿತ್ತು.* ಯುನೆಸ್ಕೋ ಅಂತಾರಾಷ್ಟ್ರೀಯವಾಗಿ ಗುರುತಿಸಿದ ರಕ್ಷಿತ ಪ್ರದೇಶಗಳನ್ನು ಜೀವ ಮಂಡಲ ( ಜೀವಗೋಳ ) ಮೀಸಲು ಎಂದು ಕರೆಯಲಾಗುತ್ತದೆ ಇದು ಜಾಗತಿಕ ಜೀವಗೋಳ ಮೀಸಲು ಜಾಲದ (ವರ್ಲ್ಡ್ ನೆಟ್ ವರ್ಕ್ ಆಫ್ ಬಯೋಸ್ಪಿಯರ್ ರಿಸರ್ವ್ಸ್) ವ್ಯಾಖ್ಯಾನ ವಾಗಿದೆ.* ಈ ಮೀಸಲು ಪ್ರದೇಶಗಳ ಉದ್ದೇಶವು ಪ್ರಕೃತಿ ಮತ್ತು ಮಾನವರ ನಡುವೆ ಸಮತೋಲಿತ ಸಂಬಂಧವನ್ನು ಪ್ರದರ್ಶಿಸುವುದು ಇದರ ಉದ್ದೇಶವಾಗಿದೆ ಹಾಗು ಸುಸ್ಥಿರ ಅಭಿವೃದ್ಧಿಗಾಗಿ ಪ್ರಕೃತಿ ಹಾಗೂ ಮಾನವರ ನಡುವೆ ಸೌಹಾರ್ದವಾದ ಬಾಂಧವ್ಯ ಏರ್ಪಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.* ಖುವ್ಸ್ ಗುಲ್ ಸರೋವರವು ರಷ್ಯಾ ಗಡಿ ಸಮೀಪವಿರುವ ಮಂಗೋಲಿಯಾದ ಖುವ್ಸ್ ಗುಲ್ ಪ್ರದೇಶದಲ್ಲಿ ಇದೆ ಹಾಗು ಶೇಕಡ 70 ರಷ್ಟು ತಾಜಾ ನೀರನ್ನು ಈ ಸರೋವರವು ಹೊಂದಿದೆ ಇದು ಸಮುದ್ರ ಮಟ್ಟದಿಂದ ಸುಮಾರು 1,645 ಮೀಟರ್ ಎತ್ತರದಲ್ಲಿದೆ ಹಾಗು ಇದು 262 ಮೀಟರ್ ಆಳ 135 ಕಿಲೋ ಮೀಟರ್ ಉದ್ದವಿದೆ.* ಈ ಜಾಲದಲ್ಲಿ ಇದುವರೆಗೆ ಮಂಗೋಲಿಯಾದ ಒಟ್ಟು ಒಂಭತ್ತು ಸ್ಥಳಗಳಿವೆ ಹಾಗೆ ಇದು ಮಂಗೋಲಿಯಾದ ಅತಿ ದೊಡ್ಡ ತಾಜಾ ಜಲ ಸರೋವರವಾಗಿದೆ ಮತ್ತು ವಿಸ್ತೀರ್ಣದಲ್ಲಿ ಇದು ಆ ದೇಶದ ಎರಡನೇ ದೊಡ್ಡ ಸರೋವರವಾಗಿದೆ.* ಈ ಸರೋವರವು ಬೈಕಲ್ ಸರೋವರದಿಂದ 200 ಕಿಲೋ ಮೀಟರ್ ಪಶ್ಚಿಮ ದಲ್ಲಿ ಖುವ್ಸ್ ಗುಲ್ ಸರೋವರವು ಇದೆ ಮತ್ತು ಇದರಲ್ಲಿ ಎರಡು ಸರೋವರವಿದೆ ಮತ್ತು ಈ ಖುವ್ಸ್ ಗುಲ್ ಸರೋವರವನ್ನು ತಂಗಿ ಸರೋವರ ಎನ್ನಲಾಗಿದೆ.* ಅನೇಕ ಪರ್ವತ ಗಳಿಂದ ಈ ಖುವ್ಸ್ ಗುಲ್ ಸರೋವರವು ಸುತ್ತುವರೆದಿದೆ ಈ ಪೈಕಿ ಅತ್ಯಂತ ಎತ್ತರದ ಪರ್ವತವು ಬುರೇನ್ ಖಾನ್ ಅಥವಾ ಮಾಂಕ್ ಸರಿದಾಗ್ ಇವು ಅತ್ಯಂತ ಎತ್ತರದ ಪರ್ವತಗಳಾಗಿವೆ ರಷ್ಯಾ ಮತ್ತು ಮಂಗೋಲಿಯಾದ ಗಡಿಗಳಿಗೆ ಇದರ ಶಿಖರ ಹಬ್ಬಿದೆ.