Job Description: * ' ಆಪರೇಷನ್ ಸಂಕಲ್ಪ್' ಅನ್ನು ಭಾರತೀಯ ನೌಕಾಪಡೆಯು ಕೊಲ್ಲಿಯಲ್ಲಿ ಕಾರ್ಯಾಚರಣೆಯನ್ನು ನಡೆಸುತ್ತಿದೆ ಇದರಲ್ಲಿ ಭಾಗವಹಿಸುತ್ತಿರುವುದು ಸ್ಟೀಲ್ತ್ ಫ್ರೀಗೇಟ್ ಆದ ಐಎನ್‌ಎಸ್‌ ತಲ್ವಾರ್ ಗಳು ಭಾಗವಹಿಸುತ್ತಿದೆ.* ಮೂರು ವರ್ಷಗಳಿಂದ ಫ್ರೀಗೇಟ್ ತಲ್ವಾರ್ ಕೊಲ್ಲಿಯಲ್ಲಿ ಇದ್ದು ಭಾರತದ ಜಲಪ್ರದೇಶದ ಹಿತಾಸಕ್ತಿಗಳನ್ನು ಕಾಯುವ ಭಾರತೀಯ ನೌಕಾಪಡೆಯ ಕಾರ್ಯಾಚರಣೆಯ ಭಾಗವಾಗಿ ಕಾರ್ಯ ನಿರ್ವಹಿಸುತ್ತಿದೆ.* ಐಎನ್‌ಎಸ್ ತಲ್ವಾರ್ ಇದು ಭಾರತೀಯ ನೌಕಾ ಪಡೆಯ ಪ್ರಮುಖವಾದ ತಲ್ವಾರ್ - ವರ್ಗದ ಫ್ರೀಗೇಟ್ ಗೆ ಸೇರಿದ ನೌಕೆ ಯಾಗಿದೆ ಈ ನೌಕೆಯನ್ನು ರಷ್ಯಾದಲ್ಲಿ ನಿರ್ಮಿಸಿದ್ದಾರೆ.* ಐಎನ್‌ಎಸ್ ತಲ್ವಾರ್ 2003 ರ ಜೂನ್ 18 ರಂದು ಭಾರತೀಯ ನೇವಿಗೆ ಸೇರ್ಪಡೆಗೊಂಡಿತ್ತು ಈ ನೌಕೆಯು 2003 ರಿಂದ ಅನೇಕ ಕಾರ್ಯಗಳನ್ನು ಹಾಗು ಅನೇಕ ಕಾರ್ಯಾಚರಣೆ ಮತ್ತು ಕವಾಯತುಗಳಲ್ಲಿ ಪಾಲ್ಗೊಂಡಿದೆ.* ಸೊಮಾಲಿಯಾ ಕರಾವಳಿಯಲ್ಲಿ ಕಡಲ್ಗಳ್ಳತನ ಮತ್ತು ವಿರೋಧಿ ಕಾರ್ಯಾಚರಣೆಗಳಲ್ಲಿಯೂ ಈ ನೌಕೆಯು ಸಹಕಾರಿಯಾಗಿದೆ.* ತಲ್ವಾರ್ ವರ್ಗದ ನೌಕೆಗಳು ಕ್ರಿವಾಕ್-3 ಫ್ರೀಗೇಟ್ಗಳನ್ನು ಪರಿವರ್ತಿಸಿ ತಯಾರಿಸಲಾದ ನಿರ್ದೇಶಿತ ಕ್ಷಿಪಣಿಗಳಾಗಿವೆ.* ರಷ್ಯಾದಲ್ಲಿ ಈ ಸಮರ ನೌಕೆಯಲ್ಲಿರುವ ಬಹುತೇಕ ಉಪಕರಣಗಳನ್ನು ತಯಾರಿಸಲಾಗಿದೆ ಇದರಲ್ಲಿ ಭಾರತೀಯ ಮೂಲದ ಸಾಧನಗಳನ್ನು ಸಹ ಅಳವಡಿಸಲಾಗಿದೆ.* ಐಎನ್‌ಎಸ್ ತಲ್ವಾರ್ ಅನ್ನು ರಷ್ಯಾದ ಬಾಲ್ಟಿಯಿಸಿಸ್ ಕಿಯ್ ಶಿಪ್‌ಯಾರ್ಡ್‌ನಲ್ಲಿ ನಿರ್ಮಿಸಲಾಗಿತ್ತು ಅದನ್ನು 2000 ಮೇ ತಿಂಗಳಲ್ಲಿ ಕಾರ್ಯಾರಂಭ ಮಾಡಲಾಗಿತ್ತು ಆದರೆ ಇದನ್ನು ಔಪಚಾರಿಕವಾಗಿ ಭಾರತೀಯ ನೇವಿಗೆ 2003 ಜೂನ್ 18 ರಂದು ಸೇರ್ಪಡೆ ಮಾಡಲಾಯಿತು.* ಆಪರೇಷನ್‌ ಸಂಕಲ್ಸ್ ಅನ್ನು ಭಾರತೀಯ ನೇವಿಯು ಗಲ್ಫ್ ವಲಯದಲ್ಲಿ 2019 ಜೂನ್ 19 ರಂದು ಆರಂಭಿಸಿತ್ತು.* ಆಪರೇಷನ್‌ ಸಂಕಲ್ಸ್ ಅನ್ನು ಒಮನ್ ಕೊಲ್ಲಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆದಾಗ ಆ ವಲಯದಲ್ಲಿ ಭದ್ರತಾ ಪರಿಸ್ಥಿತಿ ಹದಗೆಟ್ಟಿದ್ದ ರಿಂದ ಇದಕ್ಕೆ ಚಾಲನೆಯನ್ನು ನೀಡಬೇಕಾಯಿತು.* ಈ ಕಾರ್ಯಾಚರಣೆಯನ್ನು ಹೊರ್ಮುಜ್ ಜಲಸಂಧಿ ಮೂಲಕ ಭಾರತೀಯ ಧ್ವಜ ಹೊತ್ತ ನೌಕೆಗಳು ಸುಗಮವಾಗಿ ಹಾದು ಹೋಗುವುದನ್ನು ಖಾತರಿಪಡಿಸಲು ಕಾರ್ಯಾಚರಣೆ ಪ್ರಾರಂಭಿಸಿದರು.* ಆಪರೇಷನ್‌ ಸಂಕಲ್ಸ್ ಅನ್ನು ವಿದೇಶಾಂಗ,ನೌಕಾಯಾನ,ರಕ್ಷಣಾ,ಪೆಟ್ರೋಲಿಯಂ, ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮುಂತಾದ ವಿಭಾಗಗಳ ನೆರವಿನಿಂದ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.* ಭಾರತೀಯ ನೇವಿ ಗಲ್ಫ್ ವಲಯದಲ್ಲಿ ಪರಿಸ್ಥಿತಿ ಮೇಲೆ ಕಣ್ಣಿಡಲು ಈ ಕಾರ್ಯಾಚರಣೆಯ ಮೂಲಕ ಸಾಧ್ಯವಾಗಿದೆ ಹಾಗು ಜಲ ಮಾರ್ಗದ ಮೂಲಕ ವಾಣಿಜ್ಯದ ಸುರಕ್ಷತೆ ಮತ್ತು ಇಂಡಿಯನ್ ಫ್ಲ್ಯಾಗ್ ಮರ್ಚಂಟ ವೆಸೆಲ್ ಗಳ ಸುರಕ್ಷತೆ ಖಚಿತಪಡಿಸಿಕೊಳ್ಳಲು ಸಾಧ್ಯ.