Job Description: * ಸರ್ಬಿಯಾದ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ವಿಂಬಲ್ಡನ್ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. * ಜೊಕೊವಿಕ್ ಪ್ರಸಕ್ತ ವರ್ಷದ 3 ನೇ ಗ್ರ್ಯಾನ್‌ಸ್ಲಾಮ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ನಿಕ್ ಕಿರ್ಗಿಯೊಸ್ ಅವರನ್ನು 4-6, 6-3, 6-4, 7-6 ಸೆಟ್‌ಗಳಿಂದ ಸೋಲಿಸಿದರು .* ಮೊದಲ ಸೆಟ್‌ ಅನ್ನು ಕಿರ್ಗಿಯೋಸ್ ತಮ್ಮ ಅದ್ಭುತ ಸರ್ವ್‌ಗಳ ಮೂಲಕ ಗೆದ್ದರು. ಆದರೆ ಅವರಿಗೆ ಮುಂದೆ ಅದೇ ಲಯವನ್ನು ಕಾಯ್ದುಕೊಳ್ಳಲಾಗಲಿಲ್ಲ.* ನೊವಾಕ್ ಜೊಕೊವಿಕ್ ಅವರ 7 ನೇ ವಿಂಬಲ್ಡನ್ ಮತ್ತು 21 ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯಾಗಿದೆ. ಇದೀಗ ಇವರು *ನೊವಾಕ್ ಇವರು ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಹಿಂದಿಕ್ಕಿ ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ದಾಖಲೆ ಮಾಡಿದ್ದಾರೆ. ಫೆಡರರ್ ಇದುವರೆಗೆ 20 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.* ರಾಜ ಫೆಡರರ್ : ರೋಜರ್ ಫೆಡರರ್ ಅತಿ ಹೆಚ್ಚು ವಿಂಬಲ್ಡನ್ ಪ್ರಶಸ್ತಿಗಳನ್ನು ಗೆದ್ದವರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.* ಫೆಡರರ್ ಇದುವರೆಗೆ 8 ವಿಂಬಲ್ಡನ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.* ಆಸ್ಟ್ರೇಲಿಯಾದ ಕಿರ್ಗಿಯೋಸ್ ತನ್ನ ಮೊದಲ ಗ್ರ್ಯಾನ್ ಸ್ಲಾಮ್ ಫೈನಲ್ ನೊವಾಕ್ ಜೊತೆ ಆಡಿದ್ದಾರೆ* ಇವಾನಿಸೆವಿಕ್ ಈಗ ಜೊಕೊವಿಚ್ ಅವರ ಕೋಚ್ ಆಗಿದ್ದು, ಪಂದ್ಯದ ವೇಳೆ ಸೆಂಟರ್ ಕೋರ್ಟ್ಗೆ ಅತಿಥಿಯಾಗಿ ಆಗಮಿಸಿದ್ದರು.