Job Description: * 2022 ಜುಲೈ 1 ರಿಂದ ಒಂದು ಬಾರಿ ಮಾತ್ರ ಬಳಸಬಹುದಾದ ಪ್ಲಾಸ್ಟಿಕ್ ( ಎಸ್‌ಯುಪಿ ) ವಸ್ತುಗಳ ಬಳಕೆ ಮೇಲಿನ ನಿಷೇಧ ದೇಶದಾದ್ಯಂತ ಜಾರಿಯಾಗಿದೆ.* ಸರ್ಕಾರವು ಏಕ - ಬಳಕೆ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ , ಆಮದು , ಸಂಗ್ರಹ , ವಿತರಣೆ , ಮಾರಾಟ ಮತ್ತು ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ.* 2021 ಆಗಸ್ಟ್ 12 ಹೆಚ್ಚಿನ ಪ್ರಯೋಜನವಿಲ್ಲದ ಮತ್ತು ಅಧಿಕ ತ್ಯಾಜ್ಯ ಉತ್ಪಾದನೆ ಮಾಡಿ ಪರಿಸರಕ್ಕೆ ಹಾನಿ ಮಾಡುವ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸಿ ಎಂದು ಆದೇಶ ಹೊರಡಿಸಲಾಗಿತ್ತು. * ಈ ಆದೇಶವನ್ನು ಪರಿಸರ , ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಅಧಿಸೂಚನೆಯನ್ನು ಹೊರಡಿಸಿತ್ತು.* ನಿಷೇಧದ ವ್ಯಾಪ್ತಿಗೆ ಪಾಲಿಸ್ಟಿರೀನ್ ಮತ್ತು ಎಕ್ಸ್ ಪಾಂಡೆಡ್ ಪಾಲಿಸ್ಟಿರೀನ್ ವಸ್ತುಗಳೂ ಅಧಿಸೂಚನೆಗೆ ಬರುತ್ತದೆ.* 2019 ಜನವರಿ 21 ರಂದು ಎಸ್‌ಯುಪಿ ಬಳಕೆ ನಿಷೇಧ ಸಂಬಂಧ ಸಚಿವಾಲಯ ಎಲ್ಲ ರಾಜ್ಯಗಳು ,ಕೇಂದ್ರಾಡಳಿತ ಪ್ರದೇಶಗಳು ಮತ್ತು ಎಲ್ಲ ಸಚಿವಾಲಯಗಳಿಗೆ ಅಧಿಕೃತವಾಗಿ ಮಾರ್ಗಸೂಚಿಯನ್ನು ಕಳಿಸಿತ್ತು.* ಇಯರ್ ಬಡ್ ಗಳಲ್ಲಿ ಬಳಸುವ ಪ್ಲಾಸ್ಟಿಕ್ ಸ್ಟಿಕ್, ಬಲೂನ್, ಕ್ಯಾಂಡಿ ಹಾಗು ದಿನಬಳಕೆಯ ವಸ್ತುಗಳಲ್ಲಿ ಬಳಸುವ ಪ್ಲಾಸ್ಟಿಕ್ ಗಳಾದ ಪ್ಲೇಟ್, ಲೋಟ, ಸ್ವೀಟ್ ಬಾಕ್ಸ್ , ಅಮಂತ್ರಣ ಪತ್ರಿಕೆ , ಸಿಗರೇಟ್ ಪ್ಯಾಕೇಟ್ ಗಳಿಗೆ ಬಳಸುವ ಪ್ಯಾಕೇಜಿಂಗ್ ಫಿಲ್ಮ್ ಕವಚ, ಪ್ಲಾಸ್ಟಿಕ್ ಬಾವುಟಗಳು ಇವುಗಳನ್ನು ನಿಷೇದಿಸಲಾಗಿದೆ.* 100 ಮೈಕ್ರಾನ್ ಗಿಂತ ಕಡಿಮೆ ಪ್ರಮಾಣದ ಪಿವಿಸಿ ಬ್ಯಾನರ್ ಗಳು ಮತ್ತು ಅಲಂಕಾರಕ್ಕೆ ಬಳಸುವ ಪಾಲಿಸ್ಟಿರೀನ್ ಗಳನ್ನೂ ನಿಷೇದಿಸಲಾಗಿದೆ.* ಪಾಲಿಥಿನ್ ಕ್ಯಾರಿ ಬ್ಯಾಗಗಳನ್ನೂ 2021 ರ ಡಿಸೇಂಬರ್ ನಿಂದ ಕನಿಷ್ಠ ದಪ್ಪ 120 ಮೈಕ್ರಾನ್ ಏರಿಸುವ ಗುರಿಯನ್ನು ಹೊಂದಿದೆ.