Job Description: * ಇತ್ತೀಚೆಗೆ ಯುಎನ್ ಆಫೀಸ್ ಆನ್ ಡ್ರಗ್ಸ್ ಮತ್ತು ಕ್ರೈಮ್ಸ್ ಅನ್ನು ವಿಶ್ವ ಡ್ರಗ್ಸ್ ವರದಿ 2022 ರ ಪ್ರಕಾರ ಬಿಡುಗಡೆ ಮಾಡಿದೆ.* ಗಾಂಜಾವನ್ನು ಕಾನೂನುಬದ್ಧಗೊಳಿಸುವುದು ಅದರ ದೈನಂದಿನ ಬಳಕೆ ಮತ್ತು ಸಂಬಂಧಿತ ಆರೋಗ್ಯದ ಪರಿಣಾಮಗಳನ್ನು ಈ ವರದಿಯು ಹೆಚ್ಚಿಸಿದೆ.* ಈ ವರದಿಯಲ್ಲಿ ಹೊಸ ಮಾರುಕಟ್ಟೆಯ ಸಂಶ್ಲೇಷಿತ ಔಷಧಿಗಳ ವಿಸ್ತರಣೆ, ಕೊಕೇನ್ ಉತ್ಪಾದನೆಯಲ್ಲಿನ ಹೆಚ್ಚಳ ಮತ್ತು ಔಷಧ ಚಿಕಿತ್ಸೆಗಳ ಲಭ್ಯತೆಯ ಬಗ್ಗೆ ಈ ವರದಿಯು ಎತ್ತಿ ತೋರಿಸಿದೆ.* 2020 ರ ಪ್ರಕಾರ ಪ್ರಪಂಚದಾದ್ಯಂತ ಸುಮಾರು 284 ಮಿಲಿಯನ್ ಜನರು ಅದರಲ್ಲಿ 15-64 ವಯಸ್ಸಿನವರು ಡ್ರಗ್ಸ್ ಬಳಸಿದ್ದಾರೆ ಎಂಬ ವರದಿಯಾಗಿದೆ ಇದರಲ್ಲಿ ಹೆಚ್ಚಾಗಿ ಯುವಕರು ಡ್ರಗ್ಸ್ ಬಳಸುತ್ತಾರೆ ಎಂಬ ವರದಿಯಾಗಿದೆ. * ಕಳೆದ ದಶಕಕ್ಕೆ ಹೋಲಿಸಿದರೆ ಶೇಕಡಾ 26 ರಷ್ಟು ಡ್ರಗ್ ಬಳಕೆಯು ಹೆಚ್ಚಾಗಿದೆ ಎಂಬುವುದು ಈ ವರದಿಯಿಂದ ತಿಳಿಯಬಹುದು.* 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರು ಮಾದಕವಸ್ತು ಬಳಕೆಯ ನಂತರ ಅಸ್ವಸ್ಥ ಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ವರದಿಯು ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿ ತಿಳಿದು ಬಂದಿದೆ. * ಡ್ರಗ್ಸ್ ಬಳಕೆ ಇಂದ 2 ಮಿಲಿಯನ್ ಜನರು ಔಷಧಗಳನ್ನು ಚುಚ್ಚುತ್ತಿದ್ದರು. ಈ ಸಂಖ್ಯೆಯ ಅರ್ಧದಷ್ಟು ಜನರು ಹೆಪಟೈಟಿಸ್ ಸಿ, 1.4 ಮಿಲಿಯನ್ ಎಚ್ಐವಿ ಮತ್ತು 1.2 ಮಿಲಿಯನ್ ಎಚ್ಐವಿ ಮತ್ತು ಹೆಪಟೈಟಿಸ್ ಸಿ ಯೊಂದಿಗೆ ಬಳಲುತ್ತಿದ್ದಾರೆ.* ಅಂತರರಾಷ್ಟ್ರೀಯ ಸಮುದಾಯ, ನಾಗರಿಕ ಸಮಾಜ, ಸರ್ಕಾರಗಳು ಮತ್ತು ಎಲ್ಲಾ ಮಧ್ಯಸ್ಥಗಾರರನ್ನು ಉತ್ತೇಜಿಸುವ ಪ್ರಾಮುಖ್ಯತೆಯನ್ನು ವರ್ಲ್ಡ್ ಡ್ರಗ್ಸ್ ವರದಿಯು ಜನರನ್ನು ರಕ್ಷಿಸಲು ತುರ್ತು ಕ್ರಮವನ್ನು ಕೈಗೊಳ್ಳಲು ಒತ್ತಿಹೇಳುತ್ತದೆ.* ಜನರನ್ನು ರಕ್ಷಿಸಲು ಅಕ್ರಮ ಮಾದಕ ದ್ರವ್ಯ ಪೂರೈಕೆಯನ್ನು ನಿಭಾಯಿಸುವ ಮೂಲಕ ಮತ್ತು ಮಾದಕವಸ್ತು ಬಳಕೆ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯನ್ನು ಬಲಪಡಿಸುವ ಮೂಲಕ ಇದು ಪರಿಣಾಮಕಾರಿಯಾಗಿದೆ.* ಉತ್ತರ ಅಮೆರಿಕಾದಲ್ಲಿ ಗಾಂಜಾವನ್ನು ಕಾನೂನುಬದ್ಧಗೊಳಿಸುವಿಕೆಯು ಮತ್ತು ಅದರ ದೈನಂದಿನ ಬಳಕೆಯನ್ನು ಹೆಚ್ಚಿಸಿದೆ ಹಾಗು ಹೆಚ್ಚುತ್ತಿರುವ ಬಳಕೆಯಿಂದ, ಜನರು ಮಾನಸಿಕ ಅಸ್ವಸ್ಥತೆಗಳು, ಆತ್ಮಹತ್ಯೆಗಳು ಮತ್ತು ಹೀಗೆ ಅನೇಕ ಖಾಯಿಲೆ ಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.* 2019 ರಲ್ಲಿ ಕೊಕೇನ್ ತಯಾರಿಕೆಯು 11 ಪ್ರತಿಶತವನ್ನು ಹೊಂದಿತ್ತು 2020 ರಲ್ಲಿ 1,982 ಟನ್‌ಗಳಿಗೆ ಏರಿದೆ.* 2020 ರಲ್ಲಿ ಕೊಕೇನ್ ವಶಪಡಿಸಿಕೊಳ್ಳುವಿಕೆಯು 1,424 ಟನ್‌ಗಳಿಗೆ ಹೆಚ್ಚಿದೆ ಹಾಗು 2021 ರಲ್ಲಿ ವಶಪಡಿಸಿಕೊಂಡ ಕೊಕೇನ್‌ನ ಸುಮಾರು 90 ಪ್ರತಿಶತವು ಕಂಟೇನರ್‌ಗಳಲ್ಲಿ ಮತ್ತು ಸಮುದ್ರದ ಮೂಲಕ ಸಾಗಿಸಲಾಗಿದೆ.* ಉತ್ತರ ಅಮೆರಿಕಾ ಮತ್ತು ಯುರೋಪ್‌ನ ಹೊರಗಿನ ಮುಖ್ಯ ಮಾರುಕಟ್ಟೆಗಳಿಗೆ ಕೊಕೇನ್ ಕಳ್ಳಸಾಗನಿಕೆ ಯನ್ನು ವಿಸ್ತರಿಸುತ್ತಿದೆ ಎಂದು ವಶಪಡಿಸಿಕೊಳ್ಳುವ ಡೇಟಾ ಸೂಚಿಸುತ್ತದೆ ಹಾಗು ಶೇಕಡಾ ಏಳು ರಷ್ಟು 2020-2021ರ ಅವಧಿಯಲ್ಲಿ ಅಫೀಮು ಉತ್ಪಾದನೆಯು ವಿಶ್ವದಾದ್ಯಂತ ಹೆಚ್ಚಾಗಿದೆ.