Job Description: * ಕಜಕಸ್ತಾನದ ನೂರ್ ಸುಲ್ತಾನ್‌ನಲ್ಲಿ ನಡೆದ ಚೊಚ್ಚಲ ಎಲೊರ್ಡ ಬಾಕ್ಸಿಂಗ್ ಕಪ್ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವ ಯೂತ್ ಚಾಂಪಿಯನ್ ನಲ್ಲಿ ಆಫಿಯಾ ಪಠಾಣ್ ಮತ್ತು ಗೀತಿಕಾ ಅವರು ಚಿನ್ನದ ಪದಕ ಗೆದ್ದರು.* ಸೋಮವಾರ ಕಡೆಯ ದಿನವಾದ ಸ್ಪರ್ಧೆಯಲ್ಲಿ ಕಲೈವನಿ ಶ್ರೀನಿವಾಸನ್ ಮತ್ತು ಜಮುನಾ ಬೋರೊ ಅವರು ಬೆಳ್ಳಿ ಪದಕವನ್ನು ಜಯಸಿದರು.* ಒಟ್ಟು 14 ಪದಕಗಳನ್ನು ತೆಗೆದುಕೊಂಡು ಭಾರತವು ತನ್ನ ಅಭಿಯಾನವನ್ನು ಕೊನೆಗೊಳಿಸಿತು ಹಾಗು ಭಾರತವು ತಲಾ ಎರಡು ಚಿನ್ನ ಮತ್ತು ಬೆಳ್ಳಿಯ ಜತೆ 10 ಕಂಚಿನ ಪದಕಗಳನ್ನು ಜಯಗಳಿಸಿತು.* ಆಫಿಯಾ ರವರು ಮಹಿಳೆಯರ 81 ಕೆ.ಜಿ ವಿಭಾಗದ ಫೈನಲ್ ನಲ್ಲಿ 5 -0 ರಲ್ಲಿ ಲಜ್ಜತ್ ಕಂಗಿಬಯೇವಾ ಅವರನ್ನು ಸೋಲಿಸಿದರು.* ಗೀತಿಕಾ ರವರು 48 ಕೆಜಿ ವಿಭಾಗದಲ್ಲಿ 4 -1 ರಲ್ಲಿ ಭಾರತದವರೇ ಆದ ಕಲೈವನಿ ಶ್ರೀನಿವಾಸನ್ ವಿರುದ್ಧ ಗೆದ್ದರು.