Job Description: * ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ದಿಂದಾಗಿ ಆಹಾರ ಕೊರತೆಗೆ ಆಸ್ಪದ ವಾಗದಂತೆ ಆಹಾರ ಸಾಗಣೆಯ ಹಡಗುಗಳನ್ನು ಉಕ್ರೇನ್ ಬಂದರಿನಿಂದ ನಿರ್ಗಮಿಸಲು ಅವಕಾಶವನ್ನು ನೀಡಬೇಕು ಎಂದು ರಷ್ಯಾ ವನ್ನು ಒತ್ತಾಯಿಸಿದರು.* ಬಲವಂತವಾಗಿ ಕರೆದೊಯ್ಯದಿರುವ ಉಕ್ರೇನ್ ಪ್ರಜೆಗಳನ್ನು ಸುರಕ್ಷಿತವಾಗಿ ಅವರ ತವರು ದೇಶಕ್ಕೆ ವಾಪಸ್ಸು ಕಳಿಸಬೇಕು ಎಂದು ಆಗ್ರಹಿಸಿದರು.* ರಷ್ಯಾಗೆ ಕ್ಷಿಪಣಿಗಳನ್ನು ಪೂರೈಕೆ ಮಾಡಬಾರದು ಎಂದು ತಿಳಿಸಿದರು.* ಜಿ - 7 ಸದಸ್ಯ ರಾಷ್ಟ್ರಗಳು ಎಷ್ಟು ಸಾಧ್ಯವೋ ಅಷ್ಟು ಕಾಲ ಯುದ್ಧ ಬಾಧಿತ ಉಕ್ರೇನ್ ಗೆ ಬೆಂಬಲವಾಗಿ ನಿಲ್ಲುವುದಾಗಿ ತಿಳಿಸಿದರು.* ಜಿ - 7 ಶೃಂಗದ ಸದಸ್ಯ ರಾಷ್ಟ್ರಗಳು ಜರ್ಮನಿ, ಅಮೇರಿಕ, ಫ್ರಾನ್ಸ್, ಇಟಲಿ, ಕೆನಡಾ, ಜಪಾನ್ ಮತ್ತು ಬ್ರಿಟನ್ ಇವುಗಳನ್ನು ಹೊರತು ಪಡಿಸಿ ಈ ಬಾರಿ ಭಾರತ,ಅರ್ಜೆಂಟಿನಾ, ಇಂಡೋನೇಷ್ಯಾ, ಸೆನೆಗಲ್, ದಕ್ಷಿಣ ಆಫ್ರಿಕಾ ಗಳಿಗೂ ಶೃಂಗ ಸಭೆಗೆ ಅಹ್ವಾನ ನೀಡಲಾಗಿತ್ತು.* ಉಕ್ರೇನ್ ಅಧ್ಯಕ್ಷ ವೊಲೊಡಿಮಿರ ಝೆಲೇನ್ ಸ್ಕಿ ರವರು ಉಕ್ರೇನ್ಗೆ ಹೆಚ್ಚಿನ ಶಸ್ತ್ರಾಸ್ತ್ರ ಒದಗಿಸಬೇಕು ಮತ್ತು ರಷ್ಯಾಗೆ ಇನ್ನಷ್ಟು ನಿರ್ಬಂಧಗಳನ್ನೂ ಹೇರಬೇಕು ಎಂದು ವಿಡಿಯೋ ಭಾಷಣ ದಲ್ಲಿ ಹೇಳಿದರು.