Job Description: * ಇಂಟೆಲ್ ಇಂಡಿಯಾ ಕಂಪನಿಯು ಬೆಂಗಳೂರಿನಲ್ಲಿ ಆಧುನಿಕ ಸೌಲಭ್ಯ ಹೊಂದಿರುವ ಹೊಸ ವಿನ್ಯಾಸ ಮತ್ತು ಎಂಜಿನಿಯರಿಂಗ್ ಕೇಂದ್ರವನ್ನು ಆರಂಭಿಸಿದೆ.* ಅಮೆರಿಕದಿಂದ ಹೊರಗೆ ಇಂಟೆಲ್ ಸ್ಥಾಪಿಸಿರುವ ಅತಿದೊಡ್ಡ ವಿನ್ಯಾಸ ಹಾಗೂ ಎಂಜಿನಿಯರಿಂಗ್ ಕೇಂದ್ರ ಎಂದು ಕಂಪನಿ ತಿಳಿಸಿದೆ* ಇಂಟೆಲ್ ಇಂಡಿಯಾ ಕಂಪನಿಯು ಬೆಳ್ಳಂದೂರು ಬಳಿಯ ಇಕೊಸ್ಪೇಸ್ ಬಿಸಿನೆಸ್ ಪಾರ್ಕ್‌ನಲ್ಲಿ 4.53 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಇದು ನಿರ್ಮಾಣಗೊಂಡಿದೆ* ಡೇಟಾ ಸೆಂಟರ್ , ಗ್ರಾಫಿಕ್ಸ್ , ಕೃತಕ ಬುದ್ಧಿಮತ್ತೆ ವಲಯಗಳಿಗೆ ಈ ಕೇಂದ್ರವು ನೆರವಾಗಲಿದೆ ಎಂದು ತಿಳಿಸಿದೆ .* ಚಿಪ್ ಕೊರತೆಯು ಇನ್ನು ಎರಡರಿಂದ ಮೂರು ವರ್ಷಗಳಲ್ಲಿ ಸರಿಹೋಗಲಿದೆ ಎಂದು ಇಂಟೆಲ್ ಇಂಡಿಯಾ ಮುಖ್ಯಸ್ಥೆ ನಿವೃತಿ ರಾಯ್ ತಿಳಿಸಿದ್ದಾರೆ* ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐ.ಟಿ. ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಈ ಕೇಂದ್ರವನ್ನು ಉದ್ಘಾಟಿಸಿದರು . ರಾಜ್ಯ ಸರ್ಕಾರದ ಐ.ಟಿ. , ಬಿ.ಟಿ. ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್ . ಅಶ್ವತ್ಥ ನಾರಾಯಣ ಇದ್ದರು.