Job Description: * ರಕ್ಷಣಾ ಸಹಕಾರಕ್ಕೆ ಸಂಬಂಧಿಸಿದ ದೂರದೃಷ್ಟಿ ಹೇಳಿಕೆಗೆ ( ವಿಷನ್ ಸ್ಟೇಟ್‌ಮೆಂಟ್ ) ಭಾರತ ತ್ತು ಇಸ್ರೇಲ್ ಸಹಿ ಹಾಕಿವೆ* ಉಭಯ ದೇಶಗಳ ನಡುವಿನ ದೀರ್ಘಕಾಲೀನ ರಕ್ಷಣಾ ಸಹಕಾರವನ್ನು ಇನ್ನಷ್ಟು ಬಲಪಡಿಸುವುದು ಈ ಹೇಳಿಕೆಯ ಉದ್ದೇಶವಾಗಿದೆ * ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ಇಸ್ರೇಲ್ ರಕ್ಷಣಾ ಸಚಿವ ಬೆನ್ನಿ ಗಾಂಟ್ ಈ ಹೇಳಿಕೆಗೆ ಸಹಿ ಹಾಕಿದ್ದಾರೆ * ಇಸ್ರೇಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಸೂಪರ್ ಪವರ್ ಆಗಿದೆ . ಭಾರತ ಕೈಗಾರಿಕಾ ಸೂಪರ್ ಪವರ್ ಆಗಿದೆ . ಆದರಿಂದ ಎರಡೂ ದೇಶಗಳ ನಡುವಿನ ಸಹಕಾರವು ಆಯಾ ದೇಶಗಳ ಸಾಮರ್ಥ್ಯವನ್ನು ವಿಸ್ತರಿಸಲು ನೆರವಾಗುತ್ತದೆ* ಭಾರತ ಮತ್ತು ಇಸ್ರೇಲ್ ಎರಡೂ ದೇಶಗಳು ಪರಸ್ಪರ ಒಟ್ಟಾಗಿ ಕೆಲಸ ಮಾಡುವುದರಿಂದ ಆರ್ಥಿಕ ಮತ್ತು ಭದ್ರತಾ ಹಿತಾಸಕ್ತಿಗಳನ್ನು ಮುಂದಕ್ಕೊಯ್ಯುವ ಸಾಮರ್ಥ್ಯ ವೃದ್ಧಿಗೆ ಸಹಾಯಕವಾಗುತ್ತದೆ ಎಂಬ ಉದ್ದೇಶದಿಂದ ಹೇಳಿಕೆಗೆ ಸಹಿ ಹಾಕಿದರು .* ಭಾರತ ಇಸ್ರೇಲ್ ಹೇಳಿಕೆಯ ಚರ್ಚಿತ ವಿಷಯಗಳು- ಮಿಲಿಟರಿ ಸಹಕಾರ .- ವ್ಯೂಹಾತ್ಮಕ ಜಾಗತಿಕ ಸವಾಲುಗಳು - ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ - ರಕ್ಷಣಾ ಕೈಗಾರಿಕಾ ಸಹಕಾರ , ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ( ಡಿಆರ್‌ಡಿಒ ) ಮತ್ತು ಇಸ್ರೇಲ್‌ನ ಸಂಶೋಧನೆ ಮತ್ತು ಅಭಿವೃದ್ಧಿ ನಿರ್ದೇಶನಾಲಯ ನಡುವೆ ಒಂದು ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು ಅದು ಕೂಡ ಸಭೆಯಲ್ಲಿ ಚರ್ಚಿತವಾಯಿತು.