Job Description: * ಜಾನಪದ ವಿದ್ವಾಂಸ ಕನ್ನಡ ಮತ್ತು ತುಳು ಸಂಶೋಧಕ ನಿವೃತ್ತ ಕುಲಪತಿ ಡಾ.ಬಿ.ಎ.ವಿವೇಕ ರೈ ಅವರಿಗೆ 1ಲಕ್ಷ ರೂ ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡ ಪ್ರತಿಷ್ಟಿತ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಲಭಿಸಿದೆ* ವಿವೇಕ್ ಅವರು ಪ್ರಾಚೀನ ಕನ್ನಡ ಕಾವ್ಯಗಳ ಇಂಗ್ಲಿಷ್ ಅನುವಾದಕ ಹಾಗೂ ಅಂಕಣಕಾರರೂ ಆಗಿದ್ದಾರೆ * ಈ ಪ್ರಶಸ್ತಿಯನ್ನು ಉದ್ದಿಮೆಯಾಗಿರುವ ಟೀಮ್ ಮೋಹನ್ ದಾಸ್ ಪೈ ಅವರು ತನ್ನ ತಾಯಿಯ ಹೆಸರಿನಲ್ಲಿ ಸ್ಥಾಪಿಸಿಧಾರೆ * ಮಂಗಳೂರು ಮಂಗಳೂರು ಸ್ನಾತಕೋತ್ತರ ಕೇಂದ್ರ ಮತ್ತು ಮಂಗಳೂರು ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿ ಸುಮಾರು 34 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಅದರಲ್ಲಿ 18 ವರ್ಷಗಳ ಕಾಲ ವಿಭಾಗದ ಮುಖ್ಯಸ್ಥರಾಗಿ ವಿವೇಕ್ ಅವರು ಕಾರ್ಯನಿರ್ವಹಿಸಿದ್ದಾರೆ.* ಇವರು ಕನ್ನಡ ವಿಶ್ವವಿದ್ಯಾಲಯ ಹಂಪಿ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ* ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾಲಯದ ಇಂಡಾಲಜಿ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಅತಿಥಿ ಪ್ರಾಧ್ಯಾಪಕರಾಗಿ ಯುರೋಪಿಯನ್ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಮತ್ತು ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬೋಧಿಸಿದ್ದಾರೆ * ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸ್ಥಾಪಕ ಅಧ್ಯಕ್ಷರೂ ಆಗಿದ್ದರು ಕನ್ನಡದಲ್ಲಿ ವರು 24 ಸ್ವತಂತ್ರ ಕೃತಿಗಳನ್ನು ರಚಿಸಿದ್ದಾರೆ * ಹದಿನೆಂಟು ಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿ 18 ಕ್ಕೂ ಹೆಚ್ಚು ಕೃತಿಗಳ ಸಂಪಾದಕರಾಗಿರುವ ಇವರು ತುಳುವಿನಲ್ಲಿ 2 ಕೃತಿಗಳನ್ನು ಹಾಗೂ ಇಂಗ್ಲಿಷ್ ನಲ್ಲಿ 6 ಕೃತಿಗಳನ್ನು ರಚಿಸಿದ್ದಾರೆ * ರಾಜ್ಯ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಅನೇಕ ಪ್ರತಿಷ್ಠಿತ ಪ್ರಶಸ್ತಿ ಪುರಸ್ಕ ತ ಕಾರಗಳೂ ವಿವೇಕರ ಕೈಗೆ ಲಭಿಸಿವೆ