Job Description: * ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಎಫ್‌ಐಎಚ್‌ ಪ್ರೊ ಲೀಗ್‌ಗೆ 20 ಸದಸ್ಯರ ಭಾರತ ಪುರುಷರ ತಂಡವನ್ನು ಪ್ರಕಟಿಸಲಾಗಿದೆ. ಮನ್‌ಪ್ರೀತ್‌ ಸಿಂಗ್‌ಗೆ ನಾಯಕತ್ವ ಹಾಗೂ ಹರ್ಮನ್‌ಪ್ರೀತ್‌ ಸಿಂಗ್‌ಗೆ ಉಪನಾಯಕನ ಸ್ಥಾನ ನೀಡಲಾಗಿದೆ.* ಯುವ ಡ್ರ್ಯಾಗ್‌ ಫ್ಲಿಕ್ಕರ್‌ ಜುಗ್ರಾಜ್‌ ಸಿಂಗ್‌ ಮತ್ತು ಸ್ಟ್ರೈಕರ್‌ ಅಭಿಷೇಕ್‌ ತಂಡದಲ್ಲಿ ಆಯ್ಕೆ ಆಗಿರುವ ಹೊಸಬರಾಗಿದ್ದರೆ * ಸ್ಟ್ರೈಕರ್‌ ಅಭಿಷೇಕ್‌ ಜೂನಿಯರ್‌ ಪ್ರತಿಭಾನ್ವೇಷಣೆಯಲ್ಲಿ ಆಯ್ಕೆಯಾದ ಆಟಗಾರನಾಗಿದ್ದಾರೆ. 2017 ಮತ್ತು 2018 ರಲ್ಲಿ ಅಲ್ಲದೇ ಸುಲ್ತಾನ್‌ ಆಫ್‌ ಜೊಹರ್‌ ಕಪ್‌ ಟೂರ್ನಿಯಲ್ಲಿ ಭಾರತ ಯುವ ತಂಡದಲ್ಲಿಆಡಿದ್ದರು. ಹರಿಯಾಣದ ಸೋನೆಪತ್‌ನ ಅಭಿಷೇಕ್‌ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ತಂಡವನ್ನು ಪ್ರತಿನಿಧಿಸಿದ್ದಾರೆ.* ಅನುಭವಿ ಗೋಲ್‌ಕೀಪರ್‌ಗಳಾದ ಪಿ.ಆರ್‌. ಶ್ರೀಜೇಶ್‌ ಮತ್ತು ಕೃಷನ್‌ ಬಹಾದರೂ ಪಾಠಕ್‌ ಕೂಡ ಸ್ಥಾನ ಪಡೆದಿದ್ದಾರೆ