Job Description: * ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ತರಂಗಾಂತರ ಹರಾಜು ನಡೆಸಲು ದೂರಸಂಪರ್ಕ ಇಲಾಖೆಯ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.* ಸಾರ್ವಜನಿಕ ಮತ್ತು ಉದ್ದಿಮೆಗಳಿಗೆ 5ಜಿ ಸೇವೆಗಳನ್ನು ಒದಗಿಸಲು ಯಶಸ್ವಿ ಹರಾಜುದಾರರು(ಬಿಡ್ ದಾರರಿಗೆ) ತರಂಗಾಂತರವನ್ನು ಹಂಚಿಕೆ ಮಾಡಲಾಗುವುದು. * 2015 ರಿಂದೀಚೆಗೆ ದೇಶಾದ್ಯಂತ 4ಜಿ ಸೇವೆಗಳ ತ್ವರಿತ ವಿಸ್ತರಣೆಯ ಮೂಲಕ ಭಾರಿ ಉತ್ತೇಜನ ನೀಡಲಾಗಿದೆ. 2014 ರಲ್ಲಿ ಹತ್ತು ಕೋಟಿ ಚಂದಾದಾರರಿಗೆ ಹೋಲಿಸಿದರೆ, ಇದೀಗ ಎಂಭತ್ತು ಕೋಟಿ ಚಂದಾದಾರರು ಇಂದು ಬ್ರಾಡ್‌ಬ್ಯಾಂಡ್‌ ಸಂಪರ್ಕವನ್ನು ಹೊಂದಿದ್ದಾರೆ. * ದೇಶದಲ್ಲಿ ರಚಿಸಲಾದ 4ಜಿ ಪೂರಕ ವ್ಯವಸ್ಥೆಯು ಇದೀಗ 5ಜಿ ದೇಶೀಯ ಅಭಿವೃದ್ಧಿಗೆ ಕಾರಣವಾಗುತ್ತಿದೆ. ಭಾರತದ 8 ಉನ್ನತ ತಂತ್ರಜ್ಞಾನ ಸಂಸ್ಥೆಗಳಲ್ಲಿ 5ಜಿ ಟೆಸ್ಟ್ ಬೆಡ್ ವ್ಯವಸ್ಥೆಯು ಭಾರತದಲ್ಲಿ ದೇಶೀಯ 5ಜಿ ತಂತ್ರಜ್ಞಾನದ ಬಿಡುಗಡೆಯನ್ನು ತ್ವರಿತಗೊಳಿಸುತ್ತಿದೆ.* ಮುಂಬರುವ 5ಜಿ ಸೇವೆಗಳು ಹೊಸ ಯುಗದ ವ್ಯವಹಾರಗಳನ್ನು ಸೃಷ್ಟಿಸಲು, ಉದ್ಯಮಗಳಿಗೆ ಹೆಚ್ಚುವರಿ ಆದಾಯವನ್ನು ಗಳಿಸಲು ಮತ್ತು ವಿನೂತನ ವಿಧಾನ ಬಳಕೆ ಮಾಡುವ ಪ್ರಕರಣಗಳು ಮತ್ತು ತಂತ್ರಜ್ಞಾನಗಳ ನಿಯೋಜನೆಯಿಂದ ಉಂಟಾಗುವ ಉದ್ಯೋಗಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿವೆ.* 20 ವರ್ಷಗಳ ಮಾನ್ಯತೆಯ ಅವಧಿಯೊಂದಿಗೆ ಒಟ್ಟು 72097.85 ಎಂಎಚ್ಝಡ್ ಸ್ಪೆಕ್ಟ್ರಮ್ ಅನ್ನು 2022ರ ಜುಲೈ ಅಂತ್ಯದ ವೇಳೆಗೆ ಹರಾಜು ಮಾಡಲಾಗುವುದು.* ನಾನಾ ಕಡಿಮೆ ತರಂಗಾಂತರ ಅಂದರೆ (600 MHz, 700 MHz, 800 MHz, 900 MHz, 1800 MHz, 2100 MHz, 2300 MHz), ಮಧ್ಯಮ ತರಂಗಾಂತರ (3300 MHz) ಮತ್ತು ಅಧಿಕ ತರಂಗಾಂತರ (26 GHz) ಆವರ್ತನ ಬ್ಯಾಂಡ್‌ಗಳಿಗಾಗಿ ತರಂಗಾಂತರ ಹರಾಜು ನಡೆಯಲಿದೆ.* ಸದ್ಯದಲ್ಲೇ 5ಜಿ ಸೇವೆಗಳ ಬಿಡುಗಡೆ- ಅದು 4ಜಿಗಿಂತ 10 ಪಟ್ಟು ಅಧಿಕ ವೇಗ ಹೊಂದಿರಲಿದೆ.* 20 ವರ್ಷಗಳ ಅವಧಿಗೆ ಸುಮಾರು 72 ಜಿಎಚ್ ಝಡ್ ತರಂಗಾಂತರ ಹರಾಜು ಮಾಡಲು ಕ್ರಮ