Job Description: * ಜೂನ್ 15 ರಂದು ಮಾನ್ಸೂನ್ ಮಳೆಯು ಈಶಾನ್ಯಕ್ಕೆ ಅಪ್ಪಳಿಸುತ್ತಿದ್ದಂತೆ ಮೇಘಾಲಯದ ಚಿರಾಪುಂಜಿ ದಾಖಲೆ ಮಟ್ಟದಲ್ಲಿ ಮಳೆಯು ಸುರಿದಿದೆ. * ಈ ಮಳೆಯು ಬರೋಬ್ಬರಿ 811.6 ಮಿಮೀ ಭಾರಿ ಮಳೆಯನ್ನು ದಾಖಲಿಸಿದ ಇದು 1995 ರ ನಂತರ ಜೂನ್ ನಲ್ಲಿ ಸುರಿದ ಅತಿ ಹೆಚ್ಚು ಮಳೆಯ ಪ್ರಮಾಣ ಎಂದು ಹವಾಮಾನ ಇಲಾಖೆ ತಿಳಿಸಿದೆ.* ಚಿರಾಪುಂಜಿ ಜೂನ್ ತಿಂಗಳ 10 ಸಂದರ್ಭಗಳಲ್ಲಿ 750 ಮಿ.ಮೀ ಗಿಂತ ಹೆಚ್ಚು ಮಳೆಯನ್ನು ದಾಖಲಿಸಿದೆ ಎಂದು ಅಂಕಿಅಂಶಗಳು ತೋರಿಸಿವೆ.* ಜೂನ್ 16 , 1995 ರಂದು ಪೂರ್ವ ಖಾಸಿ ಬೆಟ್ಟಗಳಲ್ಲಿ ನೆಲೆಸಿರುವ ಪಟ್ಟಣವು 710.6 ಮಿ.ಮೀ ಮಳೆ ದಾಖಲಾಗಿದೆ. ಜೂನ್ 15 , 1995 ರಂದು ಇದು 930 ಮಿಮೀ ಮಳೆಯನ್ನು ಪಡೆಯಿತು.* ನೈಋತ್ಯ ಮುಂಗಾರು ಮಳೆ ಬುಧವಾರ ಮಹಾರಾಷ್ಟ್ರ , ಕರ್ನಾಟಕ , ತಮಿಳುನಾಡು ಮತ್ತು ಕರಾವಳಿ ಆಂಧ್ರಪುದೇಶದ ಹೆಚ್ಚಿನ ಭಾಗಗಳಿಗೆ ಮುಂದುವರೆದಿದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.