Job Description: * ರಾಯಚೂರಿನಲ್ಲಿ ನಡೆದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಹಿತಿ ಎಚ್‌.ಎಸ್‌ ಶಿವಾರಾರ್ ಭಾಗಿಯಾಗಿದ್ದರು * ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ರಾಷ್ಟ್ರಮಟ್ಟದ ಪ್ರಶಸ್ತಿ ಕೊಡಲಾಯಿತು* ಸಾಹಿತಿಗಳಾದ ಜಿನದತ್ತ ದೇಸಾಯಿ, ಡಾ.ನಾ.ಮೊಗಸಾಲೆ, ಡಾ.ಸರಸ್ವತಿ ಕಚಿಮ್ಮಲಗಿ, ಪ್ರೊ.ಬಸವರಾಜ ಕಲ್ಕುಡಿ ಮತ್ತು ಯಲ್ಲಪ್ಪ , ಕೆ.ಕೆ.ಪುರ ಅವರಿಗೆ ' ಗೌರವ ಪ್ರಶಸ್ತಿ ' ಪ್ರದಾನ ಮಾಡಲಾಯಿತು . ಪ್ರಶಸ್ತಿಯು Rs 50 ಸಾವಿರ ನಗದು ಒಳಗೊಂಡಿದೆ.* ಸಾಹಿತಿಗಳಾದ ಡಾ. ಚಂದ್ರಕಲಾ ಬಿದರಿ, ಪ್ರೊ.ಎಂ.ಎನ್.ವೆಂಕಟೇಶ, ಡಾ. ಚನ್ನಬಸವಯ್ಯ ಹಿರೇಮಠ, ಡಾ.ಮ. ರಾಮಕೃಷ್ಣ, ಅಬ್ದುಲ್ ರಶೀದ್ , ಡಾ.ವೈ. ಎಂ.ಭಜಂತ್ರಿ, ಗಿರೀಶರಾವ್ ಹತ್ವಾರ, ಮೈಸೂರು ಕೃಷ್ಣಮೂರ್ತಿ, ಗಣೇಶ ಅಮೀನಗಡ, ಆಲೂರು ದೊಡ್ಡನಿಂಗಪ್ಪ ಅವರಿಗೆ ' ಸಾಹಿತ್ಯ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು Rs25 ಸಾವಿರ ನಗದು ಒಳಗೊಂಡಿದೆ.* ದತ್ತಿ ಬಹುಮಾನಕ್ಕೆ ಆಯ್ಕೆಯಾದ 10 ಕೃತಿಗಳ ಲೇಖಕರಿಗೂ ಬಹುಮಾನ ನೀಡಲಾಯಿತು.* ಸಾಹಿತಿ ಎಚ್‌. ಎಸ್.ಶಿವಪ್ರಕಾಶ್ ' ಮಹಾರಾಜರು ನಿರ್ಮಿಸಿದ ಸ್ಮಾರಕಗಳು ಆಳಿದುಹೋಗಿವೆ. ಆದರೆ, ಸಾಹಿತ್ಯ ಪರಂಪರೆಗೆ ಅಳಿವಿಲ್ಲ ಎಂದು ಹೇಳಿದರು.* ಈ ಸಮಾರಂಭದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.