Job Description: * ಪಂಜಾಬ್, ಶುಕ್ರವಾರ ʻಖೇಲೋ ಇಂಡಿಯಾ ಯೂತ್ ಗೇಮ್ಸ್‌ʼನಲ್ಲಿ ಫೀನಿಕ್ಸ್‌ನಂತೆ ಮೇಲೆದ್ದು ಬಹು ನಿರೀಕ್ಷಿತ ಬಾಲಕರ ಹಾಕಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.* ಫೈನಲ್‌ನಲ್ಲಿ, ಭರತ್ ಠಾಕೂರ್ ಅವರ ಭರ್ಜರಿ ಪ್ರದರ್ಶನದೊಂದಿಗೆ ಉತ್ತರ ಪ್ರದೇಶವನ್ನು ಪಂಜಾಬ್ 3-1ರಿಂದ ಸೋಲಿಸಿತು. * ಭರತ್ ಠಾಕೂರ್ (4ನೇ ಮತ್ತು 47ನೇ) ಮತ್ತು ರಾಜಿಂದರ್ ಸಿಂಗ್ ತಮ್ಮ 5ನೇ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಪರಿವರ್ತಿಸಿ ರಾಷ್ಟ್ರೀಯ ಚಾಂಪಿಯನ್ನರ ದಾಳಿಯನ್ನು ಹತ್ತಿಕ್ಕಿದರು. 11ನೇ ನಿಮಿಷದಲ್ಲಿ ತಂಡದ ನಾಯಕಿ ಶಾರದಾ ನಂದ್ ತಿವಾರಿ ಅವರ ಮೂಲಕ ಯುಪಿ 10 ಪೆನಾಲ್ಟಿ ಕಾರ್ನರ್‌ಗಳನ್ನು ಗಳಿಸಿತಾದರೂ ಕೇವಲ ಒಂದು ಪೆನಾಲ್ಟಿ ಕಾರ್ನರ್ ಅನ್ನು ಮಾತ್ರ ಪರಿವರ್ತಿಸುವಲ್ಲಿ ಸಫಲವಾಯಿತು.* ಎರಡು ಬಾರಿ ಬೆಳ್ಳಿ ಮತ್ತು ಕಂಚಿನ ಪದಕದೊಂದಿಗೆ ಪೋಡಿಯಂ ಏರಿದ್ದೇವು. ಆದರೆ ಇಂದು ಹುಡುಗರು ಪರಿಪೂರ್ಣ ಹಾಕಿಯನ್ನು ಪ್ರದರ್ಶಿಸಿದ್ದಾರೆ,ʼʼ ಎಂದು ತರಬೇತುದಾರ ಯುಧ್ವಿಂದರ್ ಸಿಂಗ್ ಹೇಳಿದರು.* ಒಡಿಶಾ ತಂಡ ಜಾರ್ಖಂಡ್ ತಂಡವನ್ನು 8-0 ಗೋಲಿನಿಂದ ಬಗ್ಗುಬಡಿದು ಕಂಚಿನ ಪದಕಕ್ಕೆ ಕೊರಳೊಡ್ಡಿತು.* ಏತನ್ಮಧ್ಯೆ, ತಮಿಳುನಾಡಿನ ಬಾಲಕಿಯರು ಆತಿಥೇಯ ಹರಿಯಾಣವನ್ನು 3-2ರಿಂದ ಸೋಲಿಸಿ ಜಾರ್ಖಂಡ್‌ ವಿರುದ್ಧ ರೋಚಕ ಫೈನಲ್ ಪ್ರವೇಶಿಸಿದರು, ಅವರು ಗುಜರಾತ್ ಅನ್ನು 3-0 ಅಂತರದಿಂದ ಸೋಲಿಸಿದರು.* ಆರ್ಚರಿಯಲ್ಲಿ, ʻಟಾಪ್ಸ್ ಡೆವೆಲಪ್‌ಮೆಂಟ್‌ʼ ಸ್ಕ್ವಾಡ್‌ ಅಥ್ಲೀಟ್ ಪಾರ್ಥ ಸಾಳುಂಕೆ ಅವರು ʻರಿಕರ್ವ್ ಬಾಯ್ʼ ಅರ್ಹತೆಯಲ್ಲಿ ಅಗ್ರಸ್ಥಾನ ಪಡೆದರೆ, ಚಂಡೀಗಢದ ದಿವ್ಯಾಂಶ್ ಕುಮಾರ್ ಮತ್ತು ಪಶ್ಚಿಮ ಬಂಗಾಳದ ಜುಯೆಲ್ ಸರ್ಕಾರ್ ಎರಡು ಮತ್ತು ಮೂರನೇ ಸ್ಥಾನಗಳನ್ನು ಪಡೆದರು. * ʻಕಾಂಪೌಂಡ್ ಗರ್ಲ್ಸ್ʼ ವಿಭಾಗದಲ್ಲಿ ರಾಜಸ್ಥಾನದ ಪ್ರಿಯಾ ಗುರ್ಜರ್ ಮೊದಲ ಸ್ಥಾನ ಗಳಿಸಿದರೆ, ಪಂಜಾಬ್‌ನ ಪ್ರಣೀತ್ ಕೌರ್ ಮತ್ತು ಅವ್ನೀತ್ ಕೌರ್ ನಂತರದ ಸ್ಥಾನದಲ್ಲಿದ್ದಾರೆ.