Job Description: * ಇತ್ತೀಚಿಗೆ ನಡೆದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಕ್ರಿಕೆಟ್ ತಂಡವು ಕ್ವಾಟರ್ ಫೈನಲ್ ನಲ್ಲಿ ಉತ್ತರಾಖಂಡದ ವಿರುದ್ಧ 725 ರನ್ ಗಳಿಂದ ಜಯಿಸಿತು.* ಮುಂಬೈ ಕ್ರಿಕೆಟ್ ತಂಡವು ದೇಶಿ ಕ್ರಿಕೆಟ್‌ನಲ್ಲಿ ಅತಿ ದೊಡ್ಡ ಅಂತರದಿಂದ ಗೆದ್ದು ವಿಶ್ವದಾಖಲೆಯನ್ನು ನಿರ್ಮಿಸಿತು.* ಬೆಂಗಳೂರಿನ ಹೊರವಲಯದ ಆಲೂರಿನ KSCA ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಕ್ರಿಕೆಟ್ ತಂಡವು ಈ ಸಾಧನೆ ಮಾಡಿತು. * 92 ವರ್ಷಗಳ ಹಿಂದೆ ಶೆಫಿಲ್ಡ್ ಶೀಲ್ಡ್ ಟೂರ್ನಿಯಲ್ಲಿ ನ್ಯೂ ಸೌತ್‌ವೇಲ್ಸ್ ತಂಡವು 685 ರನ್‌ಗಳಿಂದ ಕ್ವಿನ್ಸ್‌ಲೆಂಡ್ ವಿರುದ್ಧ ಗೆದ್ದಿದ್ದು ಇಲ್ಲಿಯವರೆಗಿನ ದಾಖಲೆಯಾಗಿತ್ತು.* 1953-54 ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಬಂಗಾಳ ತಂಡವು 540 ರನ್‌ಗಳಿಂದ ಒಡಿಶಾ ಎದುರು ಜಯಿಸಿದ ದಾಖಲೆಯೂ ಇತ್ತು.* ಮುಂಬೈ ತಂಡವು ಉತ್ತರಾಖಂಡದ ತಂಡಕ್ಕೆ 794 ರನ್‌ಗಳ ಗುರಿ ನೀಡಿತ್ತು. ಅದಕ್ಕೆ ಉತ್ತರವಾಗಿ ಉತ್ತರಾಖಂಡವು 27.5 ಓವರ್‌ಗಳಲ್ಲಿ 69 ರನ್ ಗಳಿಸಿ ಆಲೌಟ್ ಆಯಿತು.